ಬೆಂಗಳೂರು : ಹೊಸ ವರ್ಷಕ್ಕೆ ತಯಾರಾಗಿದ್ದ ಬಾರ್ ರೆಸ್ಟೋರೆಂಟ್ ಹೋಟೆಲ್ ಗಳಿಗೆ ಫುಲ್ ಶಾಕ್ ಆಗಿದೆ.
ಮಧ್ಯರಾತ್ರಿ ಒಂದು ಗಂಟೆ ತನಕವೂ ಹೊಸ ವರ್ಷವನ್ನು ಪಬ್, ರೆಸ್ಟೋರೆಂಟ್ಗಳಲ್ಲಿ ಅದ್ದೂರಿಯಾಗಿ ಆಚರಿಸಬಹುದು ಅಂದುಕೊಂಡವರಿಗೆ ಶಾಕ್ ಕೊಟ್ಟಿದೆ.
ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿ.28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಎಲ್ಲಾ ಹೋಟೆಲ್ಗಳಲ್ಲಿ ಶೆ.50 ಜನರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಲಸಿಕೆಯ ವಿಚಾರವಾಗಿ ಹೇಳುವುದಾದರೆ ಮೊದಲ ಡೋಸ್ ಅನ್ನು ಶೇ. 97 ರಷ್ಟು ನೀಡಲಾಗಿದೆ.
75 ರಷ್ಟು ಮಂದಿಗೆ ನೀಡಲಾಗಿದೆ. ಇನ್ನೂ 45 ಲಕ್ಷ ಮಂದಿ 2ನೇ ಡೋಸ್ ತೆಗೆದುಕೊಳ್ಳುವವರಿದ್ದಾರೆ. ಓಮಿಕ್ರಾನ್ ಅತ್ಯಂತ ವೇಗದಲ್ಲಿ ಹರಡುತ್ತಿದೆ. ಹೀಗಾಗಿ ಎಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.