ಲಸಿಕೆ ಹಾಕಿಸಿಕೊಂಡವರಿಗೆ ಬಂಪರ್ ಆಫರ್!?

ಶನಿವಾರ, 12 ಫೆಬ್ರವರಿ 2022 (14:12 IST)
ನವದೆಹಲಿ : ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಲಸಿಕೆ ಪಡೆದ ಪ್ರಯಾಣಿಕರಿಗೆ ರಿಯಾಯಿತಿ ಘೋಷಿಸಿದೆ.

ಪ್ರಯಾಣಿಕರಿಗೆ ಟಿಕೆಟ್ನಲ್ಲಿ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದ್ದು, ಕೋವಿಡ್-19 ರೋಗದ ವಿರುದ್ಧ ಲಸಿಕೆಗಳನ್ನು ತೆಗೆದುಕೊಳ್ಳಲು ಜನರಿಗೆ ಈ ಮೂಲಕ ಉತ್ತೇಜನ ನೀಡುತ್ತಿದೆ.

ಕೋವಿಡ್-19 ಲಸಿಕೆಯ ಮೊದಲ ಅಥವಾ ಎರಡೂ ಡೋಸ್ಗಳನ್ನು ಪಡೆದವರು ಟಿಕೆಟ್ನ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದು ಇಂಡಿಗೋ ತಿಳಿಸಿದೆ.

ಏರ್‌ಲೈನ್‌ ಪ್ರಕಾರ ಈ ಪ್ರಯೋಜನವನ್ನು ಪಡೆಯಲು ಎಲ್ಲಾ ಪ್ರಯಾಣಿಕರು ವ್ಯಾಕ್ಸಿನೇಷನ್ನ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಲಸಿಕೆ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರವೇ ಈ ರಿಯಾಯಿತಿ ದೊರಕುತ್ತದೆ. 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಈ ಸೇವೆ ಲಭಿಸಲಿದೆ. 

ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹಂಚಿಕೊಳ್ಳಬಹುದು. ಒಂದು ವೇಳೆ ಪ್ರಯಾಣಿಕರು ವ್ಯಾಕ್ಸಿನೇಷನ್ ಪುರಾವೆಯನ್ನು ತೋರಿಸಲು ಸಾಧ್ಯವಾಗದಿದ್ದರೆ ಅವರು ಟಿಕೆಟ್ನ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ