ಭಾರತದಲ್ಲಿ ಸ್ಪುಟ್ನಿಕ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ

ಸೋಮವಾರ, 7 ಫೆಬ್ರವರಿ 2022 (21:28 IST)
ಸಿಂಗಲ್ ಡೋಸ್ ಸ್ಫುಟ್ನಿಕ್ ಲೈಟ್ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ಭಾರತದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಭಾರತದ ಪ್ರಧಾನ ಔಷಧ ನಿಯಂತ್ರಕ ಸ್ಫುಟ್ನಿಕ್ ಲೈಟ್‌ಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಕೊರೋನಾ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿಸ್ ಸ್ಫುಟ್ನಿಕ್ ಲಸಿಕೆಯನ್ನು ಬೂಸ್ಟರ್ ಆಗಿ ನೀಡಲು ಅನುಮತಿ ಕೋರಿ ಔಷಧ ನಿಯಂತ್ರಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಸೆ.2020 ರಿಂದ ರಷ್ಯಾದ ಅನುದಾನದೊಂದಿಗೆ ಸ್ಪುಟ್ನಿಕ್ ಲಸಿಕೆಯ ಟ್ರಯಲ್‌ಗಳು ಜಾರಿಯಲ್ಲಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ