ಲೈಂಗಿಕ ಕ್ರಿಯೆಯಿಂದ ಹರಡುತ್ತೆ ಮಂಕಿಪಾಕ್ಸ್‌ ಸೋಂಕು!?

ಮಂಗಳವಾರ, 26 ಜುಲೈ 2022 (16:24 IST)
ನವದೆಹಲಿ : ಮಂಕಿಪಾಕ್ಸ್ ಸೋಂಕು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ನಂತರ, ಸೋಂಕಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಹಲವಾರು ಅಚ್ಚರಿದಾಯಕ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
 
ಸೋಂಕಿತರೊಂದಿಗೆ ಸಂಪರ್ಕ ಹೊಂದುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅವರಿಗೂ ಸೋಂಕು ಹರಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

 
ಮಂಕಿಪಾಕ್ಸ್ ಸೋಂಕು ತಗುಲಿರುವವರೊಂದಿಗೆ ಸಂಕರ್ಪ ಹೊಂದದರೆ ಅವರಿಗೂ ಸೋಂಕು ಹರಡಲಿದೆ. ಚುಂಬಿಸುವುದು, ಸ್ಪರ್ಷಿಸುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ಹರಡಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

WHO ಪ್ರಕಾರ ದದ್ದುಗಳು, ದೇಹದ ದ್ರವ (ದ್ರವ, ಕೀವು ಅಥವಾ ಚರ್ಮದ ಗಾಯಗಳಿಂದ ಬರುವ ರಕ್ತ) ಮತ್ತು ಹುರುಪುಗಳು ಇತರರಿಗೂ ಸೋಂಕು ಹರಡುತ್ತವೆ. ಲಾಲಾರಸದ ಮೂಲಕ ವೈರಸ್ ಹರಡುವುದರಿಂದ ಹುಣ್ಣುಗಳು, ಗಾಯಗಳು ಸಹ ಸಾಂಕ್ರಾಮಿಕವಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಸ್ತುಗಳು (ಬಟ್ಟೆ, ಹಾಸಿಗೆ, ಟವೆಲ್, ಅಡುಗೆ ಪಾತ್ರೆಗಳು) ವಸ್ತುಗಳು ಸಹ ಸೋಂಕಿನ ಮೂಲವಾಗಿರಬಹುದು.

ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ. ಧೀರೇನ್ ಗುಪ್ತಾ, ಲೈಂಗಿಕ ಸಂಪರ್ಕದ ಸಮಯದಲ್ಲಿ ಮಂಕಿಪಾಕ್ಸ್ ಹರಡುವಿಕೆ ಹೆಚ್ಚಾಗುತ್ತದೆ. ಇದು ನಿಕಟ ಸಂಪರ್ಕದ ಸಮಯದಲ್ಲಿ ಸಂಭವಿಸಬಹುದು. ತಬ್ಬಿಕೊಳ್ಳುವುದು, ಮಸಾಜ್ ಮಾಡುವುದು ಮತ್ತು ಚುಂಬಿಸುವುದು ಮತ್ತು ದೀರ್ಘಾವಧಿಯ ಮುಖಾಮುಖಿ ಸಂಪರ್ಕವು ವೈರಸ್ ಹರಡುವಿಕೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ