ಜಿನೇವಾ : ವಿಶ್ವಾದ್ಯಂತ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಸೋಂಕು ಇಸ್ರೇಲ್ಗೂ ಕಾಲಿಟ್ಟಿದೆ.
ಈ ಮೂಲಕ ಪ್ರಕರಣಗಳ ಸಂಖ್ಯೆ 100ರ ಗಡಿ ದಾಡಿದೆ. ಇದರಿಂದ 13 ದೇಶಗಳಿಗೆ ಮಂಕಿಪಾಕ್ಸ್ ವ್ಯಾಪಿಸಿದಂತಾಗಿದೆ. ಇದು ಜಗತ್ತಿಗೆ ಎಚ್ಚರಿಕೆಯ ಗಂಟೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.
ವಿದೇಶದಿಂದ ಇಸ್ರೇಲ್ಗೆ ಮರಳಿ ಬಂದ ವ್ಯಕ್ತಿಯೊಬ್ಬರಲ್ಲಿ ಸೋಮವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯನ್ನು ಟೆಲ್ ಅವೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆತನ ಸ್ಥಿತಿ ಕೆಟ್ಟದಾಗಿದೆ ಎಂದು ಇಸ್ರೇಲ್ ಹೇಳಿದೆ.
ಮಂಕಿಪಾಕ್ಸ್ ಪ್ರಕರಣ ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ನಿಗಾ ವಹಿಸಿ, ಇದರ ನಿಯಂತ್ರಣಕ್ಕೆ ಹೆಚ್ಚಿನ ನಿರ್ದೇಶನ ನೀಡಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡಬ್ಲ್ಯುಎಚ್ಒ ಪ್ರಕಾರ ಮಂಕಿಪಾಕ್ಸ್ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಆದರೆ ಸಲಿಂಗಿಗಳಿಂದಲೂ ರೋಗ ಹರಡುತ್ತಿದೆ ಎಂಬ ವಾದವಿದೆ.