ಕಾವೇರಿ ನದಿ ನೀರು ಹರಿಸಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಕಾವೇರಿ ನ್ಯಾಯಧಿಕರಣ ಆದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುರುವೈ ಬೆಳೆ ಬೆಳೆದಿರುವ ತಮಿಳುನಾಡು, ಅದಕ್ಕೆ ನೀರು ಒದಗಿಸಲು ಕರ್ನಾಟಕದ ಮೇಲೆ ಒತ್ತಡ ಹೇರುತ್ತಿದೆ. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ಅವಧಿಯಲ್ಲೂ ತಮಿಳುನಾಡು ಸಾಮಾನ್ಯ ಜಲ ವರ್ಷದ ನೀರಿನ ಪಾಲು ಕೇಳುತ್ತಿದೆ ಎಂದು ಆರೋಪಿಸಿದೆ.
ಕಾವೇರಿ ಜಲಾನಯನದಲ್ಲಿರುವ ನೀರು ಸದ್ಯಕ್ಕೆ ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ 42% ಮಳೆ ಕೊರತೆಯಾಗಿದೆ. ಈಗ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯದಲ್ಲಿರುವ ಪ್ರಸುತ್ತ ಬೆಳೆ ಮತ್ತು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.
ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಈ ಎಲ್ಲ ಸವಾಲುಗಳ ನಡುವೆ CWMA ಆದೇಶದ ಬಳಿಕ ಕರ್ನಾಟಕ ತಮಿಳುನಾಡಿಗೆ ಕರ್ನಾಟಕ ನೀರು ಹರಿಸಿದೆ. ಆದರೆ ಸಾಮಾನ್ಯ ವರ್ಷದ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಎರಡು ಅಂಶಗಳನ್ನು ಆಧರಿಸಿ ಕೋರ್ಟ್ ವಾದ ಮತ್ತು ಪ್ರತಿವಾದವನ್ನು ಆಲಿಸಲಿದೆ.