ಚುನಾವಣೆ ಬರುವಾಗ ರಾಹುಲ್ ಗಾಂಧಿಗೆ ದೇವಾಲಯ ನೆನಪಾಗುತ್ತದೆ: ಸಿಎಂ ಯೋಗಿ ಟೀಕೆ
ಸೋಮವಾರ, 25 ಜೂನ್ 2018 (10:11 IST)
ನವದೆಹಲಿ: ಚುನಾವಣೆ ಹತ್ತಿರ ಬರುವಾಗ, ಪ್ರಚಾರದ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ಕೊಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆಗ ಮಾತ್ರ ದೇವರ ನೆನಪಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕೆ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ‘ರಾಹುಲ್ ಗೆ ಚುನಾವಣೆ ಬಂದಾಗ ದೇವಾಲಯಗಳು ನೆನಪಾಗುತ್ತವೆ. ರಾಹುಲ್ ಸೇರಿದಂತೆ ಅವರ ನಾಲ್ಕು ತಲೆ ಮಾರು ಯಾವತ್ತೂ ಜನಿವಾರ ಹಾಕಿದವರಲ್ಲ. ಆದರೆ ಚುನಾವಣೆ ಬಂದಾಗ ರಾಹುಲ್ ಜನಿವಾರ ತೋರಿಸುತ್ತಾರೆ’ ಎಂದಿದ್ದಾರೆ.
ರಾಹುಲ್ ಯಾವತ್ತೂ ದೇವಾಲಯದ ಕಡೆಗೆ ಹೆಜ್ಜೆ ಹಾಕಿದವರಲ್ಲ. ಆದರೆ ಚುನಾವಣೆ ಬಂದಾಗ ಬರುತ್ತಾರೆ. ಯಾರೇ ಆದರೂ ಭಕ್ತಿ, ಭಾವದಿಂದ ದೇವಾಲಯಕ್ಕೆ ಬರಬೇಕೇ ಹೊರತು ಸೋಗು ಹಾಕಿಕೊಂಡು ಬರಬಾರದು ಎಂದು ಸಿಎಂ ಯೋಗಿ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.