ಭಾರತದಲ್ಲಿ ವಿವಾಹವಾಗುವ ಎನ್ಆರ್ ಐಗಳಿಗೆ ಶಾಕ್ ನೀಡಿದ ಕೇಂದ್ರ
ಗುರುವಾರ, 7 ಜೂನ್ 2018 (08:48 IST)
ನವದೆಹಲಿ: ಭಾರತದಲ್ಲಿ ವಿವಾಹವಾಗುವ ಭಾರತೀಯ ಮೂಲದ ವಿದೇಶೀ ವಾಸಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.
ಇನ್ನು ಮುಂದೆ ಭಾರತದಲ್ಲಿ ವಿವಾಹವಾದರೆ ವಿವಾಹವಾದ 48 ಗಂಟೆ್ಗಳೊಳಗೆ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಪಾಸ್ ಪೋರ್ಟ್ ಮತ್ತು ವೀಸಾ ರದ್ದುಗೊಳಿಸಲಾಗುವುದು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಭಾರತದಲ್ಲಿ ವಿವಾಹವಾಗಿ ಪತ್ನಿಗೆ ಮೋಸ ಮಾಡಿ ವಿದೇಶಕ್ಕೆ ನಾಪತ್ತೆಯಾಗುವ ಎನ್‍ಆರ್‍ಐಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎನ್‍ಆರ್‍ಐ ಪತಿಗಾಗಿ ಲುಕ್ ಔಟ್ ನೋಟಿಸ್ ಕಳುಹಿಸುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.