ಚಿಕನ್ ಪ್ರಿಯರೇ ಎಚ್ಚರ...!

ಶುಕ್ರವಾರ, 24 ಡಿಸೆಂಬರ್ 2021 (08:24 IST)
ಲಂಡನ್ : ಫ್ರೆಶ್ ಆಗಿ ಆರ್ಡರ್ ಮಾಡಿದ್ದ ಕೆಎಫ್‍ಸಿ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿ ಕೋಳಿ ತಲೆ ಸಿಕ್ಕಿರುವುದನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ.

ಇನ್ನು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೇಬ್ರಿಯಲ್ ಎಂಬ ಮಹಿಳೆ ಆಗ್ನೇಯ ಲಂಡನ್ನ ಟ್ವಿಕನ್ ಹ್ಯಾಮ್ನಲ್ಲಿರುವ ಕೆಎಫ್ಸಿ ಫೆಲ್ತಮ್ನಿಂದ ಚಿಕನ್ ಹಾಟ್ ವಿಂಗ್ಸ್ ನನ್ನು ಆರ್ಡರ್ ಮಾಡಿದ್ದರು.

ಈ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿರುವ ಚಿಕನ್ ಅನ್ನು ತಿನ್ನುವ ವೇಳೆ ಅವರಿಗೆ ಕೋಳಿ ತಲೆ ಕಂಡುಬಂದಿದೆ. ಆಗ ಅದನ್ನು ಕಂಡು ಉಳಿದ ಚಿಕನ್ ಅನ್ನು ಸಹ ಸೇವಿಸಲು ಸಾಧ್ಯವಾಗದೇ ಬೀಸಾಕಿದ್ದಾರೆ. ಬೀಸಾಕುವ ಮುನ್ನ ಅದರ ಫೋಟೋವನ್ನು ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೋಟೋದಲ್ಲಿ ಕೊಕ್ಕನ್ನು ಸಹ ಕತ್ತರಿಸದೇ ಇಡೀ ತಲೆಯನ್ನು ಗರಿಗರಿಯಾಗಿ ಬೇಯಿಸಿ ಹಾಗೆಯೇ ನೀಡಿರುವುದನ್ನು ಕಾಣಬಹುದಾಗಿದೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವಾರು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ