ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ.
ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು.
ಮಸಾಲಾ ಚಿಕನ್ ಲೆಗ್ನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಚಿಕನ್ ಪ್ರಿಯರಿಗೆ ಇನ್ನಷ್ಟು ರುಚಿಕರವಾದ ಮತ್ತು ಬಾಯಲ್ಲಿ ನೀರೊರೆಸುವ ಈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲೇ ಹೋಟೆಲ್ ಶೈಲಿಯ ರುಚಿ ಕೊಡುತ್ತದೆ ಈ ವಿಧಾನ ಟ್ರೈ ಮಾಡಿ
ಬೇಕಾಗುವಸಾಮಗ್ರಿಗಳು
* ಚಿಕನ್ ಲೆಗ್ಸ್ – 4
* ಕಾಳುಮೆಣಸು – 2 ಚಮಚ
* ಶುಂಠಿ – ಸ್ವಲ್ಪ
* ಬೆಳ್ಳುಳ್ಳಿ – 2
* ಮೆಣಸಿನ ಪುಡಿ- 2 ಚಮಚ
* ಚಿಕನ್ ಮಸಾಲಾ – 2 ಚಮಚ
* ಗೋಧಿ ಹಿಟ್ಟು – ಅರ್ಧ ಕಪ್
* ಅಡುಗೆ ಎಣ್ಣೆ – 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಚಿಕನ್ ಮಸಾಲಾ- 1 ಪ್ಯಾಕೆಟ್
ಮಾಡುವವಿಧಾನ
* ಚಿಕನ್ ಲೆಗ್ಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ.
* ಕಾಳುಮೆಣಸು, ಶುಂಠಿ, ಮೆಣಸಿನ ಹುಡಿ, ಹಾಗೂ ಬೆಳ್ಳುಳ್ಳಿ, ಚಿಕನ್ ಮಸಾಲಾವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. * ಚಿಕನ್ ಕಾಲುಗಳಿಗೆ ಈ ಮಸಾಲಾ ಮಿಶ್ರಣವನ್ನು ಸವರಿ ಹಾಗೂ 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.
* ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿದರೆ ಚಿಕನ್ ಮಸಾಲಾ ಚಿಕನ್ ಲೆಗ್ ಸವಿಯಲು ಸಿದ್ಧವಾಗುತ್ತದೆ.