ಕೇರಳ ಪ್ರವಾಹಕ್ಕೆ ದುಬೈ ನೀಡಿದ ಸಹಾಯವನ್ನು ಭಾರತ ಸರ್ಕಾರ ನಿರಾಕರಿಸುತ್ತಿರುವುದರ ನಿಜ ಕಾರಣ ಏನು ಗೊತ್ತಾ?!
ಶುಕ್ರವಾರ, 24 ಆಗಸ್ಟ್ 2018 (08:01 IST)
ನವದೆಹಲಿ: ಕೇರಳ ಪ್ರವಾಹಕ್ಕೆ ಸ್ಪಂದಿಸಿದ ದುಬೈ ಸರ್ಕಾರ 700 ಕೋಟಿ ರೂ. ನೆರವು ನೀಡಲು ಬಂದಾಗ ಪ್ರಧಾನಿ ಮೋದಿ ಸರ್ಕಾರ ನಿರಾಕರಿಸಿದೆ ಎಂಬ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ನಿಜವಾಗಿ ಪ್ರಧಾನಿ ಮೋದಿ ಸರ್ಕಾರ ದುಬೈ ಅಥವಾ ವಿದೇಶೀ ನೆರವನ್ನು ನಿರಾಕರಿಸುತ್ತಿರುವುದೇಕೆ? ಭಾರತ ಯಾವುದೇ ಪ್ರಾಕೃತಿಕ ವಿಕೋಪಗಳಿಗೂ ವಿದೇಶೀ ನೆರವು ಪಡೆಯಲ್ಲ ಎಂಬ ನಿಯಮವನ್ನು ನಿಜವಾಗಿ ರೂಪಿಸಿದವರು ಯಾರು ಗೊತ್ತೇ?
ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗಲೇ ಇಂತಹದ್ದೊಂದು ನಿಯಮವನ್ನು ಜಾರಿಗೆ ತರಲಾಗಿತ್ತು. ಅದಕ್ಕಿಂತ ಮೊದಲು ಪ್ರಾಕೃತಿಕ ವಿಕೋಪಗಳಿಗೆ ಭಾರತ ನೆರೆಯ ರಾಷ್ಟ್ರಗಳ ಸಹಾಯ ಪಡೆದಿದ್ದೆ. ಆದರೆ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ ನಿಯಮವನ್ನು ಈಗ ಮೋದಿ ಸರ್ಕಾರವೂ ಮುಂದುವರಿಸಿದೆ. ಅದೇ ಕಾರಣಕ್ಕೆ ನಿಯಮದಡಿ ದುಬೈ ನೀಡಿದ ಸಹಾಯ ಹಸ್ತವನ್ನು ನಿರಾಕರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.