‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ
ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತರೂರ್ ಬಿಜೆಪಿ ಗೆದ್ದ ಸಂವಿಧಾನ ಬದಲಾಯಿಸಬಹುದು. ಭಾರತ ಹಿಂದೂ ಪಾಕಿಸ್ತಾನವಾಗಬಹುದು ಎಂದಿದ್ದರು.
ಈ ಹೇಳಿಕೆ ಖಂಡಿಸಿದ್ದ ಬಿಜೆಪಿ ಸ್ವತಃ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ಆದರೆ ತರೂರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಬಿಜೆಪಿಯವರು ಹಿಂದೂ ರಾಷ್ಟ್ರ ಎಂಬ ಪದ ಬಳಸಬಹುದಾದರೆ ನಾನ್ಯಾಕೆ ಇಂತಹ ಪದ ಬಳಕೆ ಮಾಡಬಾರದು ಎಂದು ಅವರು ಪ್ರಶ್ನಿಸಿದ್ದಾರೆ.