ಪಾಲಕರೇ ಹುಷಾರ್ ! ಮಕ್ಕಳಿಗೆ ಈ ಹಣ್ಣುಗಳನ್ನು ಎಂದೂ ಒಟ್ಟಿಗೆ ನೀಡಬೇಡಿ

ಮಂಗಳವಾರ, 28 ಆಗಸ್ಟ್ 2018 (07:27 IST)
ಬೆಂಗಳೂರು : ಹಣ್ಣು-ಹಾಲು ಮಕ್ಕಳ ಆರೋಗ್ಯ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಕೆಲವು ಹಣ್ಣುಗಳು ಮತ್ತು ಹಾಲು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಒಂದು  ಹಣ್ಣಿನ ಜೊತೆ ಇನ್ನೊಂದು ಹಣ್ಣು ಅಥವಾ ಹಾಲನ್ನು ನೀಡಬಾರದು ಎನ್ನುವ ಕುರಿತು ಮೊದಲು ಪಾಲಕರು ತಿಳಿದುಕೊಂಡಿರಬೇಕು.


*ಕಿತ್ತಳೆ ಹಣ್ಣು-ಹಾಲು: ಕಿತ್ತಳೆ ಹುಳಿ ಹಣ್ಣು. ಈ ಹಣ್ಣಿನ ಜೊತೆ ಹಾಲನ್ನು ನೀಡುವುದು ಅಪಾಯಕಾರಿ. ಕಿತ್ತಳೆ ಹಣ್ಣು ನೀಡಿದ ಎರಡರಿಂದ ಮೂರು ಗಂಟೆ ನಂತ್ರ ಹಾಲನ್ನು ಮಕ್ಕಳಿಗೆ ಕುಡಿಸಬೇಕು.


*ಪಪ್ಪಾಯಿ-ನಿಂಬೆ : ಪಪ್ಪಾಯಿ ಹಾಗೂ ನಿಂಬೆ ಹಣ್ಣನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ರಕ್ತಹೀನತೆ ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಎರಡು ಹಣ್ಣನ್ನು ಒಟ್ಟಿಗೆ ಎಂದೂ ಮಕ್ಕಳಿಗೆ ನೀಡಬೇಡಿ.


*ಸೀಬೆಕಾಯಿ-ಬಾಳೆಹಣ್ಣು: ಈ ಎರಡೂ ಹಣ್ಣನ್ನು ಒಟ್ಟಿಗೆ ತಿನ್ನುವುದರಿಂದ ಗ್ಯಾಸ್, ಎಸಿಡಿಟಿ ಸಮಸ್ಯೆ ಕಾಡುತ್ತದೆ. ಹೊಟ್ಟೆ ನೋವು ಹಾಗೂ ತಲೆನೋವು ಬರುವ ಸಾಧ್ಯತೆಯೂ ಇದೆ.


*ಕಿತ್ತಳೆ-ಕ್ಯಾರೆಟ್ : ಕಿತ್ತಳೆ ಹಣ್ಣು ಹಾಗೂ ಕ್ಯಾರೆಟ್ ಒಟ್ಟಿಗೆ ತಿನ್ನುವುದು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.


*ಅನಾನಸ್ –ಹಾಲು : ಅನಾನಸ್ ಹಾಗೂ ಹಾಲನ್ನು ಒಂದೇ ಬಾರಿ ಸೇವನೆ ಮಾಡುವುದರಿಂದ ದೇಹದಲ್ಲಿ ಹಾನಿಕಾರಕ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ