`ಏರೋ ಇಂಡಿಯಾ 2023′ ಏರ್ ಶೋಗೆ ಡೇಟ್ ಫಿಕ್ಸ್?
ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದ್ದು, ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಘೋಷಣೆಯಾಗಿದೆ.
ಫೆಬ್ರವರಿ 13-17ರ ವರೆಗಿನ ದಿನಾಂಕವನ್ನು ಗುರುತು ಮಾಡಿಕೊಳ್ಳಿ. 2023ರ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಇದು ಏರೋ ಇಂಡಿಯಾದ 14ನೇ ಆವೃತ್ತಿಯಾಗಲಿದೆ. ಹಿಂದಿನ ವರ್ಷದಂತೆ, ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನದ ದಿನಾಂಕಗಳನ್ನು ಮುಂಚಿತವಾಗಿ ಘೋಷಿಸಿದೆ.