ರಾಜ್ಯದಲ್ಲಿ ಮತ್ತೆ ಧರ್ಮ ಧಂಗಲ್ ಆರಂಭವಾಗಿದ್ದು, ಜಾತ್ರೆ ಮಹೋತ್ಸವಗಳ ವಿಚಾರದಲ್ಲೂ ಸಹ ಧರ್ಮ ದಳ್ಳುರಿ ಮುಂದುವರೆದಿದೆ. ಬೆಂಗಳೂರಿನ ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್ನಲ್ಲಿ ಇರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಮುಸ್ಲಿಂರಿಗೆ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ಹಾಕಲು ಅನುಮತಿ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ. ಬಜರಂಗದಳ ಕಾರ್ಯಕರ್ತರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಹಾಗೂ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಗೆ ಮನವಿ ಸಲ್ಲಿಸಿದ್ದಾರೆ. ಬಜರಂಗದಳ ಮುಖಂಡ ತೇಜಸ್ ಗೌಡ ಮಾತನಾಡಿ, ಇದೇ ಮಂಗಳವಾರ ಷಷ್ಠಿ ಇದ್ದು, ರಾಜ್ಯದ ಎಲ್ಲಾ ಸುಬ್ರಹ್ಮಣ್ಯ ದೇವಾಲಯದಲ್ಲೂ ವಿಜೃಂಭಣೆಯಿಂದ ಪೂಜೆ ಮಾಡಲಾಗುತ್ತೆ. ಸಜ್ಜನ್ ರಾವ್ ಸರ್ಕಲ್ನ ಸುಬ್ರಮಣ್ಯ ದೇವಾಲಯದಲ್ಲೂ ಅಪಾರ ಪ್ರಮಾಣದಲ್ಲಿ ಜನ ಸೇರುತ್ತಾರೆ. ಆದ್ದರಿಂದ ಅನ್ಯಧರ್ಮೀಯರಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದ್ದೇವೆ. ಯಾವುದೇ ರೀತಿಯ ಅಶಾಂತಿಯ ಘಟನೆಗಳು ನಡೆದ್ರೇ ಅದಕ್ಕೆ ಪೊಲೀಸ್ರು ಮತ್ತು BBMPಯೇ ಹೊಣೆ ಎಂದು ತಿಳಿಸಿದ್ದಾರೆ.