ಮಾರಣಾಂತಿಕ ವೈರಸ್ಗೆ ಮರುಜನ್ಮ! ವಿಶ್ವಕ್ಕೆ ಕಾದಿದೆಯಾ ಆಪತ್ತು?

ಬುಧವಾರ, 30 ನವೆಂಬರ್ 2022 (06:49 IST)
ಮಾಸ್ಕೋ : ಹವಾಮಾನ ವೈಪರಿತ್ಯದಿಂದಾಗಿ ಪ್ರಾಚೀನ ಪರ್ಮಾಫ್ರಾಸ್ಟ್ ಕರಗುವಿಕೆಯು ಮಾನವ ಜಗತ್ತಿಗೆ ಮತ್ತೊಂದು ವೈರಸ್ ಭೀತಿ ತಂದೊಡ್ಡಿದೆ.

ಸಾವಿರಾರು ವರ್ಷಗಳ ಹಿಂದೆ ಹೂತಿದ್ದ ಮಾರಣಾಂತಿಕ ವೈರಸ್ಗೆ ಮರುಜನ್ಮ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹೌದು, ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್ಗಳಿಗೆ ಈಗ ಮರುಜನ್ಮ ನೀಡಲಾಗಿದೆ.

‘ಜೊಂಬಿ ವೈರಸ್’ ಹೆಸರಿನ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವು ಹೆಪ್ಪುಗಟ್ಟಿದ ನೆಲದಲ್ಲಿ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ