ಟೀಕಿಸಿದವರಿಗೆ ನಟ ಪ್ರಕಾಶ್ ರೈ ನೀಡಿದ ಉತ್ತರವೇನು ಗೊತ್ತಾ…?
ಬುಧವಾರ, 16 ಮೇ 2018 (06:57 IST)
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನ ಮತ್ತು ಮೋದಿ ಆಡಳಿತವನ್ನ ಟೀಕಿಸುತ್ತಿದ್ದ ನಟ ಪ್ರಕಾಶ್ ರೈ ಅವರನ್ನ ಬಿಜೆಪಿ ಫಾಲೋವರ್ಸ್ ಕಾಲೆಳೆದಿದ್ದಾರೆ.
ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ನಟ ಪ್ರಕಾಶ್ ರೈ ಅವರನ್ನು ಕರ್ನಾಟಕದಲ್ಲಿ ಬಿಜೆಪಿ ಅಲೆ ನೋಡಿ ಪ್ರಕಾಶ್ ರೈ ತಲೆಮರೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನಟ ಪ್ರಕಾಶ್ ರೈ ಅವರು, ‘ನಾನು ಎಲ್ಲೂ ಹೋಗಿಲ್ಲ. ಕರ್ನಾಟಕ ಚುನಾವಣೆ ನೋಡುತ್ತಿದ್ದೇನೆ. ಬಿಜೆಪಿಯ ಆಟ, ಹಣ ಬಲ, ತೋಳು ಬಲದಿಂದ ಅಧಿಕಾರ ಹಿಡಿಯಲು ಹೋದ್ರಿ. ಆದ್ರೆ, ಸರ್ಕಾರ ನಡೆಸಲು ಬೇಕಾದ ಬಹುಮತ ನಿಮಗೆ ಸಿಗಲಿಲ್ಲ. ಈಗ ಎರಡು ಪಕ್ಷಗಳು ಒಟ್ಟಿಗೆ ಬಂದಿವೆ. ಪ್ರೀತಿಯ ನಾಗರೀಕರೇ ಆಟ ಇನ್ನು ಮುಗಿದಿಲ್ಲ’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಹಾಗೇ ಈ ನಾಚಿಕೇಡಿನ ರಾಜಕೀಯ ನಾಟಕವನ್ನ ನೋಡಿ, ನಾನೀಗ ಕೈಗೊಂಡಿರುವ ತೀರ್ಮಾನವೇನೆಂದರೆ, ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಪರವಾಗಿ ನಾನು 'justasking' ಎಂದು ಪ್ರಶ್ನಿಸಲು ಮುಂದಾಗುತ್ತೇನೆ. ಇದೇ ವೇಳೆ ಜೋಕರ್ ಗಳ ನಿಜಬಣ್ಣ ಬಯಲಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ