ನಟ ದುನಿಯಾ ವಿಜಯ್ ಭವಿಷ್ಯ ಇಂದು ನಿರ್ಧಾರ
ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ತಿರಸ್ಕೃತಗೊಂಡಿದ್ದರಿಂದ ವಿಜಯ್ ಮತ್ತು ಸಹಚರರು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕೈಗೊಂಡಿರುವ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಹೀಗಾಗಿ ವಿಜಯ್ ಇಂದು ಜೈಲಿನಿಂದ ಹೊರ ಬರುತ್ತಾರಾ ಅಥವಾ ಮತ್ತೆ ಬಂಧನದಲ್ಲಿಯೇ ಕಳೆಯಬೇಕಾಗುತ್ತದೋ ಎನ್ನುವುದು ಇಂದು ನಿರ್ಧಾರವಾಗಲಿದೆ.