ಮತ್ತೆ ಭೂಕಂಪ : ಜನರಲ್ಲಿ ಆತಂಕ!
ನಿನ್ನೆ ಸಂಜೆ 7.51ಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಇದು ಈ ವಾರದಲ್ಲಿ ಎರಡನೇ ಬಾರಿ ಜಿಲ್ಲೆಯಲ್ಲಿ ಭೂಮಿ ನಲುಗಿದೆ. ಇದರಿಂದಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನ ದಾಖಲಾಗಿದ್ದು, KSNDMC ಭೂಕಂಪನವನ್ನ ದೃಢಪಡಿಸಿದೆ. ಭೂಮಿ ಪದೇ ಪದೇ ಜಿಲ್ಲೆಯಲ್ಲಿ ಕಂಪಿಸುತ್ತಿರುವುದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ ದಾಖಲಾಗಿದ್ದು, 2.8 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.