ಕ್ರೈಸ್ತ ಸಮುದಾಯದವರ ಪ್ರಮುಖ ಹಬ್ಬ ಈಸ್ಟರ್

ಬುಧವಾರ, 28 ಮಾರ್ಚ್ 2018 (20:28 IST)
ಕ್ರಿಶ್ಚಿಯನ್ ಸಮುದಾಯದವರಿಗೆ ಅತ್ಯಂತ ಪ್ರಮುಖ ಹಬ್ಬವೆಂದರೆ ಈಸ್ಟರ್. ಗುಡ್‌ಪ್ರೈಡೇ ನಂತರ ಬರುವ ರವಿವಾರವೇ ಈಸ್ಟರ್ ಹಬ್ಬ. ಅತ್ಯಂತ ಭಕ್ತಿಯಿಂದ ಈಸ್ಟರ್ ಹಬ್ಬವನ್ನು ಕ್ರಿಸ್ತ ಸಮುದಾಯ ಆಚರಿಸುತ್ತದೆ. 
ಯುರೋಪ್ ರಾಷ್ಟ್ರಗಳಲ್ಲಿ ಆಚರಿಸಲಾಗುವ ಒಸ್ಟಾರಾ ಮತ್ತು ಇಸ್ಟಾರ್ ಹಬ್ಬಗಳನ್ನು ಒಂದುಗೂಡಿಸಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ
 
ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಇದಕ್ಕೆ ಕ್ರಿಶ್ಚಿಯನ್ ಸಮುದಾಯ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
 
ಭೂಮಿಯ ಮೇಲಿನ ಮನುಷ್ಯರೆಲ್ಲರೂ ಪಾಪದಿಂದ ವಿಮೋಚನೆ ಹೊಂದಲು ಯೇಸು ಕ್ರಿಸ್ತ ಶುಕ್ರವಾರದಂದು ಮರಣಕ್ಕೆ ಅರ್ಪಿಸಿಕೊಂಡರು. ಈಸ್ಟರ್ ಅನ್ನುವುದು ಯೇಸು ಕ್ರಿಸ್ತ ಮನುಷ್ಯರೊಂದಿಗೆ ಸದಾಕಾಲ ಜೀವಿಸುವುದಕ್ಕೆ ಮರಣ ಹೊಂದಿದ ಮೂರನೇ ದಿನ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ಹೀಗಾಗಿ ಇದು ಅತ್ಯಂತ ಮಹತ್ವ ಪಡೆದಿದೆ.
 
ಭೂಲೋಕದಲ್ಲಿ ಜನತೆ ತಮ್ಮೆಲ್ಲಾ ಸಂಕಷ್ಟ ಮತ್ತು ಪಾಪಗಳಿಂದ ಮುಕ್ತವಾಗಿ ನೆಮ್ಮದಿಯಿಂದರಲು ಯೇಸು ಕ್ರಿಸ್ತ ತಮ್ಮನ್ನು ತಾವೇ ಇಹಲೋಕ ತ್ಯಜಿಸಿದರು. ಯೇಸು ಕ್ರಿಸ್ತ ಮರಢ ಹೊಂದಿದ ಮೂರನೇ ದಿನವನ್ನೇ ಈಸ್ಟರ್ ಎಂದು ಕರೆಯಲಾಗುತ್ತದೆ. 
 
ವಿಶ್ವದಾದ್ಯಂತ ಈಸ್ಟರ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೇಣದ ಬತ್ತಿಗಳನ್ನು ಹಚ್ಚಿ ಈ ಹಬ್ಬ ಆಚರಣೆ ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ