ಚುನಾವಣೆ ಮುಂಜಾಗ್ರತೆ: ರೌಡಿಶೀಟರ್‌ಗಳ ಗಡಿಪಾರು

ಬುಧವಾರ, 4 ಏಪ್ರಿಲ್ 2018 (18:43 IST)
ಮಟಕಾ, ವಂಚನೆಯಂತಹ ವಿವಿಧ ಅಪರಾಧ  ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಇಬ್ಬರು ರೌಡಿ ಶೀಟರನ್ನು ಧಾರವಾಡ ಜಿಲ್ಲೆಯಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ  ನಗರದ ವ್ಯಾಪ್ತಿಯಲ್ಲಿ ಧಾರವಾಡ  ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಭಯ, ಭೀತಿಯನ್ನು  ಉಂಟು ಮಾಡುವಂತಹ ಹಾಗೂ ಮುಂಬರುವ ರಾಜ್ಯದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ  ಸದರಿ ವ್ಯಕ್ತಿ  ಅಕ್ರಮ  ಚಟುಚಟುಕೆಗಳಲ್ಲಿ   ತೊಡಗುವ  ಸಾಧ್ಯತೆ ಇರುವುದರಿಂದ ದತ್ತು ರೇವಣಸಾ   ಲದ್ವಾ (41) ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
 
ಅಮಾಯಕ ಜನರನ್ನು  ಹೆದರಿಸಿ  ಅವರಲ್ಲಿ  ಅಭದ್ರತೆ ಉಂಟು ಮಾಡಿ ಚುನಾವಣೆಯ ಪ್ರಕ್ರಿಯೆಯ  ಮೇಲೆ ಕೆಟ್ಟ ಪ್ರಭಾವ  ಬೀರುವ  ಸಾಧ್ಯತೆ ಇದ್ದು ಹಾಗೂ  ಚುನಾವಣೆ ವೇಳೆಯಲ್ಲಿ  ಅಶಾಂತಿ ಉಂಟು ಮಾಡಿ  ಕಾನೂನು ಮತ್ತು  ಸುವ್ಯವಸ್ಥೆಗೆ  ದಕ್ಕೆ ತರುವ  ಸಂಭವವಿದ್ದು ಆದ್ದರಿಂದ ಗಡಿಪಾರು ಮಾಡಲಾಗಿದೆ. 
 
ಅಲ್ಲದೇ  ಮುಕ್ತುಮಸಾಬ  ದಿಲಾವರಸಾಬ ಸೊಗಲದ (32) ಇವರ ಮೇಲೆ   ಒಟ್ಟು  04 ವಿವಿಧ ಅಪರಾಧ   ಪ್ರಕರಣಗಳು, ಅತ್ಯಾಚಾರ ಪ್ರಕರಣ  ಸೇರಿದಂತೆ ದಾಖಲಾಗಿದ್ದು, ಹುಬ್ಬಳ್ಳಿ-ಧಾರವಾಡ  ನಗರದ ವ್ಯಾಪ್ತಿಯಲ್ಲಿ ಮತ್ತು ಧಾರವಾಡ  ಜಿಲ್ಲೆಯಲ್ಲಿಯೂ ಸಹ  ಸಾರ್ವಜನಿಕರಿಗೆ ಭಯ ಭೀತಿಯನ್ನು  ಉಂಟು ಮಾಡುವ ಮತ್ತು  ಮುಂಬರುವ ರಾಜ್ಯದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ  ಸದರಿ ವ್ಯಕ್ತಿ  ಅಕ್ರಮ  ಚಟುಚಟುಕೆಗಳಲ್ಲಿ   ತೊಡಗುವ  ಸಾಧ್ಯತೆಗಳು ಇದೆ. 
 
ಅಮಾಯಕ ಜನರನ್ನು  ಹೆದರಿಸಿ  ಅವರಲ್ಲಿ  ಅಭದ್ರತೆ ಉಂಟು ಮಾಡಿ ಚುನಾವಣೆಯ ಪ್ರಕ್ರಿಯೆಯ  ಮೇಲೆ ಕೆಟ್ಟ ಪ್ರಭಾವ  ಬೀರುವ  ಸಾಧ್ಯತೆ ಇದ್ದು ಹಾಗೂ  ಚುನಾವಣೆ ವೇಳೆಯಲ್ಲಿ  ಅಶಾಂತಿ ಉಂಟು ಮಾಡಿ  ಕಾನೂನು ಮತ್ತು  ಸುವ್ಯವಸ್ಥೆಗೆ  ದಕ್ಕೆ ತರುವ  ಸಂಭವವಿರುವುದು.
 
ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ, ಧಾರವಾಡ ಜಿಲ್ಲೆಯಿಂದ ಕ್ರಮವಾಗಿ  ಬಳ್ಳಾರಿ ಜಿಲ್ಲೆಗೆ  ಹಾಗೂ   ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ