ಕೋವಿಡ್ ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಪ್ರೋತ್ಸಾಹ ಧನ

ಭಾನುವಾರ, 10 ಅಕ್ಟೋಬರ್ 2021 (07:52 IST)
ಮುಂಬೈ : ಮಹಾರಾಷ್ಟ್ರ ಸರ್ಕಾರ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ದೀಪಾವಳಿಗೂ ಮುನ್ನವೇ ಗಿಫ್ಟ್ ನೀಡಿದೆ. ಕೊರೊನಾ ವಾರಿಯರ್, ಫ್ರಂಟ್ ಲೈನ್ ವರ್ಕರ್ ಗಳಾಗಿ ಕೆಲಸ ಮಾಡಿರುವ ಮಹಾರಾಷ್ಟ್ರ ಸರ್ಕಾರ 1.21 ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡುತ್ತಿದೆ.

ಎಲ್ಲ ಸರ್ಕಾರಿ, ಆಯುರ್ವೇದ ಮತ್ತು ನಗರಪಾಲಿಕೆ ಮೆಡಿಕಲ್ ಕಾಲೇಜುಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯರಿಗೆ ಸರ್ಕಾರದ ಪ್ರೋತ್ಸಾಹ ಧನ ಸಿಗಲಿದೆ. ಈ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಅಧಿಸೂಚನೆಯನ್ನು ಸಜ ಪ್ರಕಟಿಸಿದೆ. ನವೆಂಬರ್ ನಲ್ಲಿ ಪ್ರೋತ್ಸಾಹದ ಧನದ ಮೊದಲ ಕಂತು ಹಾಗೂ ಮಾರ್ಚ್-2022ರಲ್ಲಿ ಎರಡನೇ ಕಂತು ಸಿಗಲಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಮುಂಬೈನ ರೆಸಿಡೆಂಟ್ ವೈದ್ಯರು ಸಿಎಂ ಉದ್ಧವ್ ಠಾಕ್ರೆ ನಿವಾಸದ ಮುಂದೆ ಪ್ರತಿಭಟನೆ ನಡೆಸಿ  ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಕಡಿತಗೊಳಿಸಬೇಕು. ವಿದ್ಯಾರ್ಥಿಗಳೆಲ್ಲರೂ ಕೊರೊನಾ ಕಾಲದಲ್ಲಿ ಸೇವೆ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮೂಲಸೌಕರ್ಯ ಹೆಚ್ಚಿಸಬೇಕಿದೆ. ಆಸ್ಪತ್ರೆಗಳ ಸ್ಥಿತಿ ಚೆನ್ನಾಗಿಲ್ಲ. ಬಿಎಂಸಿ ಆಸ್ಪತ್ರೆಯ ರೆಸಿಡೆಂಟ್ ವೈದ್ಯರಿಗೆ ಸಿಗುವ ಶಿಷ್ಯವೇತನದಲ್ಲಿ ಟಿಡಿಎಸ್ ಕಡಿತಗೊಳಿಸೋದನ್ನು ನಿಲ್ಲಿಸಬೇಕೆಂದು ಎಂದು ಆಗ್ರಹಿಸಿದ್ದರು.
ಸರ್ಕಾರದ ಮಹಾ ಘೋಷಣೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸ್ಟೇಟ್ ಅಸೋಸಿಯೇಶನ್ ಆಫ್ ರೆಸಿಡೆಂಡ್ ಡಾಕ್ಟರ್ಸ್ ಸಂಘದ ಅಧ್ಯಕ್ಷ ಡಾ. ಪ್ರಣವ್ ಯಾದವ್, ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸರ್ಕಾರ ಶೀಘ್ರವಾಗಿ ನಮ್ಮ ಬೇಡಿಕೆಗಳತ್ತ ಗಮನಹರಿಸಿದ್ದಕ್ಕೆ ನಮಗೆ ಖುಷಿ ಇದೆ. ಮೊದಲ ಬಾರಿಗೆ ಎರಡು ದಿನದಲ್ಲಿಯೇ ಸಭೆ ನಡೆಸಿ ಇಂತಹ ನಿರ್ಧಾರ ಘೋಷಣೆ ಮಾಡಲಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ತತ್ಕ್ಷಣ ಶೈಕ್ಷಣಿಕ ಶುಲ್ಕ ಕಡಿತಗೊಳಿಸಲು ಸಾಧ್ಯವಿಲ್ಲ. ಆದ್ರೆ ಯಾವ ರೀತಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆ ಆರ್ಥಿಕ ತಜ್ಞರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆದೋದಾಗಿ ಸರ್ಕಾರ ನಿರ್ಧರಿಸಿದೆ ಎಂದು ಯಾದವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ