ಎಕ್ಸಿಟ್ ಪೋಲ್ ಫಲಿತಾಂಶವೇ ಬರುತ್ತಿದೆ: ನಾರಾಯಣಸ್ವಾಮಿ

ಗುರುವಾರ, 10 ಮಾರ್ಚ್ 2022 (12:19 IST)
ಶಿವಮೊಗ್ಗ :  ಅಭಿವೃದ್ಧಿ ಹಾಗು ಪ್ರಾಮಾಣಿಕತೆಯನ್ನು ಜನ ಮೆಚ್ಚಿಕೊಳ್ಳುವುದಿಲ್ಲವೆನೋ, ಚುನಾವಣೆಯಲ್ಲಿ ಜಾತಿಯೇ ಪ್ರಾಮುಖ್ಯತೆ ವಹಿಸುತ್ತದೆ ಎಂದುಕೊಂಡಿದ್ದೆ.

ಆದರೆ ಎಕ್ಸಿಟ್ ಪೋಲ್ ಹೇಳಿದ ರೀತಿಯಲ್ಲಿಯೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಗೂಂಡಾಗಿರಿಯನ್ನು ದಮನಗೊಳಿಸಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆ ರಾಜ್ಯಕ್ಕೆ ವಿಶೇಷ ಆಸಕ್ತಿ ಹಾಗೂ ಅಭಿವೃದ್ಧಿ ಮಾಡಿರುವುದಕ್ಕೆ ಜನತೆ ಮತ ಹಾಕಿದ್ದಾರೆ ಎಂದರು. 

ನೂರಕ್ಕೆ ನೂರರಷ್ಟು ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಗೆಲ್ಲುತ್ತೇವೆ. ಗೋವಾದಲ್ಲಿ ಸ್ವಲ್ಪಮಟ್ಟಿಗೆ ಫಲಿತಾಂಶ ಏರಿಳಿತ ಕಾಣುತ್ತಿದೆ. ಹಾಗಂತ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಅನಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ