ಫಲಿತಾಂಶ : ಎಣ್ಣೆ ಅಂಗಡಿಗಳು ಕ್ಲೋಸ್!

ಗುರುವಾರ, 10 ಮಾರ್ಚ್ 2022 (08:47 IST)
ಲಕ್ನೋ : ಕುತೂಹಲದಿಂದ ಕಾಯುತ್ತಿರುವ ಪಂಚ ರಾಜ್ಯ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ.

ಆದರೆ, ಜಯದ ಗೆಲುವಿನ ಸಂಭ್ರಮ ಆಚರಿಸಲು, ಸೋಲಿನ ದುಃಖ ಮರೆಯಲು "ನಶೆ" ಇರುವುದಿಲ್ಲ. ಅಂದರೆ, ಚುನಾವಣಾ ಫಲಿತಾಂಶದ ದಿನವಾಗಿರುವ ಕಾರಣ ರಾಜ್ಯ ಎಲ್ಲಾ ಮದ್ಯದಂಗಡಿಗಳು ಹಾಗೂ ಬಾರ್ ಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದ್ದು, ಇಡೀ ದಿನ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಅಬಕಾರಿ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಇದರಲ್ಲಿ ನೀಡಲಾಗಿದೆ.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಲಕ್ನೋ ಬಿಡಿ ರಾಮ್ ತಿವಾರಿ ಈ ಕುರಿತಂತೆ ಮಾಹಿತಿ ನೀಡಿದ್ದು, ಮಾರ್ಚ್ 10 ರಂದು ಮತ ಎಣಿಕೆಗೆ ಸಂಬಂಧಿಸಿದಂತೆ, ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿನ ಸ್ಟ್ರಾಂಗ್ ರೂಮ್ಗಳಿಗೆ ಮೂರು ಲೇಯರ್ ಸಿಎಪಿಎಫ್ ಭದ್ರತೆ ಇದೆ.

ಮೊದಲ ಅಂಚೆ ಮತಪತ್ರದ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಅದೇ ಸಮಯದಲ್ಲಿ, ಇವಿಎಂ ಮೂಲಕ ಚಲಾವಣೆಯಾದ ಮತಗಳ ಎಣಿಕೆಯು ಬೆಳಿಗ್ಗೆ 8:30 ರಿಂದ ಪ್ರಾರಂಭವಾಗಲಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ