ಇಂದಿನಿಂದ ನ್ಯಾಯಬೆಲೆ ಅಂಗಡಿ ಬಂದ್!

ಗುರುವಾರ, 6 ಜುಲೈ 2023 (09:38 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದು ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರೆಂಟಿಗಳು. ಈಗ ಅದನ್ನ ಜಾರಿಗೆ ತರಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿದೆ.
 
ಅದರಲ್ಲಿ ಸಿಎಂ ಸಿದ್ದರಾಮಯ್ಯನವರ ಬಹಳ ಮಹತ್ವದ ಘೋಷಣೆಯಾಗಿದ್ದು ಅನ್ನಭಾಗ್ಯ ಯೋಜನೆ. ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಜುಲೈನಿಂದ ನೀಡುವುದಾಗಿ ಹೇಳಿದ್ರು. ರಾಜ್ಯ ಸರ್ಕಾರ ಅಕ್ಕಿ ನೀಡಲು  ನಾನಾ ಸರ್ಕಸ್ ಮಾಡಿದ್ರು 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಗೆ ಹಣವನ್ನ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದ್ದೆ ತಡ ನ್ಯಾಯಬೆಲೆ ವರ್ತಕರು ನಮಗೆ ಇದರಿಂದ ನಷ್ಟ ಆಗೋದು ಪಕ್ಕ, ನಾವೂ 10 ಕೆಜಿ ಅಕ್ಕಿ ನೀಡಿದ್ರೇ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತಾ ವೋಟ್ ಹಾಕಿದ್ವಿ.

ಈಗ 5 ಕೆಜಿ ಅಕ್ಕಿ ನೀಡಿದ್ರೇ ಕಮಿಷನ್ ಕಟ್ ಆಗುತ್ತೆ. ಇದನ್ನೇ ನಂಬಿಕೊಂಡಿರೋ ನಾವೂ ಹೇಗೆ ಜೀವನ ಮಾಡೋದು ಅಂತಾ ಆತಂಕಗೊಂಡಿದ್ದಾರೆ. ಇದೇ ಕಾರಣದಿಂದ ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಯನ್ನ ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ