ಸಾಲಮನ್ನಾ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಇಲ್ಲದೇ ಕನ್ ಫ್ಯೂಸ್ ಆಗಿರುವ ರೈತರು
ಭಾನುವಾರ, 15 ಜುಲೈ 2018 (08:55 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಏನೋ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರು. ಆದರೆ ರೈತರು ಮಾತ್ರ ಇನ್ನೂ ಸರಿಯಾದ ಮಾಹಿತಿಯಿಲ್ಲದೇ ಕನ್ ಫ್ಯೂಸ್ ಆಗಿ ಕೂತಿದ್ದಾರೆ.
ರೈತರ ಸಾಲಮನ್ನಾ ಬಗ್ಗೆ ಸರಿಯಾದ ಮಾಹಿತಿಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಸಾಲಮನ್ನಾ ಯಾರಿಗೆ, ಎಷ್ಟು ಎಂಬುದರ ಬಗ್ಗೆ ರೈತರಿಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.
ಸ್ಥಳೀಯ ಬ್ಯಾಂಕ್ ಗಳಿಗೆ ಇನ್ನೂ ಸುತ್ತೋಲೆ ಬಾರದೇ ಇರುವುದರಿಂದ ಸಾಲಮನ್ನಾ ಬಗ್ಗೆ ರೈತರಲ್ಲಿ ಹಲವು ಗೊಂದಲಗಳು ಬಾಕಿ ಇವೆ. ಇದಲ್ಲದೆ, ಈಗಾಗಲೇ ಸಾಲ ಪಾವತಿ ಮಾಡುವವರಿಗೆ ಸರ್ಕಾರದಿಂದ ಎಷ್ಟು ಹಣ ಪಾವತಿಯಾಗಲಿದೆ, ಇದುವರೆಗೆ ಸಾಲ ಪಾವತಿ ಮಾಡದೇ ಇರುವವರಿಗೆ ಮಾತ್ರ ಇದು ಅನ್ವಯವಾಗುತ್ತದಾ ಎಂಬುದು ಇನ್ನೂ ರೈತರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಸುತ್ತೋಲೆ ಬರುವವರೆಗೂ ಈ ಅನುಮಾನಗಳು ಹಾಗೇ ಉಳಿಯಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.