ಬೆನ್ನುಬಿಡದ ಕುಂಭದ್ರೋಣ ಮಳೆ; ರಾಜ್ಯದಲ್ಲಿ ಅಪಾರ ಬೆಳೆಹಾನಿ
ಸೋಮವಾರ, 9 ಜುಲೈ 2018 (15:29 IST)
ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕಳೆದರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕೃಷಿಗಾರಿಕೆಯಲ್ಲಿ ಬಹಳಷ್ಟು ನಷ್ಟ ಸಂಭವಿಸಿದೆ. ಕಳೆದ 3 ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಬಿಳಿಯಾರು ಪರಿಸರದ ಕೃಷಿ ಭೂಮಿ ಗೆ ನೆರೆ ನೀರು ನುಗ್ಗಿದೆ. ಅತಿವೃಷ್ಟಿಯಿಂದ ಗದ್ದೆಯಲ್ಲಿ ಬಿತ್ತನೆ ಮಾಡಿದ ಬೀಜಗಳು ನೆರೆಯ ಪಾಲಾಗಿದ್ದು ಇಲ್ಲಿನ ರೈತರು ಕಂಗಾಲಾಗಿದ್ದಾರೆ.
ಸುಮಾರು 5 ಎಕ್ಕರೆ ಜಾಗದಷ್ಟು ಗದ್ದೆಗಳಿಗೆ ಮಳೆ ನೀರು ನುಗ್ಗಿದ್ದು ಗದ್ದೆ ತುಂಬಾ ಮರಳಿನ ರಾಶಿ ತುಂಬಿಕೊಂಡಿವೆ. ಒಂದಡೆ ಗದ್ದೆಯಲ್ಲಿ ಬಿತ್ತಿರುವ ಬೀಜಗಳು ನೀರು ಪಾಲಾಗಿ ಅರ್ಥಿಕ ಸಂಕಷ್ಟ ಏದುರಿಸುತ್ತಿರುವ ಇಲ್ಲಿನ ರೈತರು ಇನ್ನೋಂದಡೆ ಗದ್ದೆಯಲ್ಲಿ ಶೇಖರಣೆಯಾಗಿರುವ ಹೂಳನ್ನು ಎತ್ತಲು ಸಾದ್ಯವಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ರೈತರು ಸಂಕಟ ಏದುರಿಸುತ್ತಿದ್ದು ಬೆಳೆ ಹಾನಿಗೆ ಪರಿಹಾರ ಸಿಗಬೇಕು.
ರೈತನೇ ದೇಶದ ಬೆನ್ನಲುಬು ಅಂತಾ ಜನಪ್ರತಿ ನಿಧಿಗಳು ವೇದಿಕೆಯಲ್ಲಿ ಬಾಷಣ ಬಿಗಿಯುತ್ತಾರೆ. ಆದ್ರೆ ರೈತ ಸಂಕಷ್ಟದಲ್ಲಿದ್ದಾಗ ಅತನ ನೆರವಿಗೆ ಯಾವುದೇ ಸರಕಾರ ಬರುತ್ತಿಲ್ಲ. ಹೀಗಾಗಿ ರೈತ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿಲ್ಲ. ಸರಕಾರದ ನಿರ್ಲಕ್ಷ್ಯತೆಯಿಂದ ಕೃಷಿ ಭೂಮಿಗಳು ಇತ್ತೀಚಿನ ದಿನಗಳಲ್ಲಿ ಹಡಿಲು ಬೀಳುತ್ತಿದೆ ಸರಕಾರ ಇನ್ನಾದ್ರೂ ಈ ಬಗ್ಗೆ ಗಮನ ಹರಿಸಬೇಕು ಎಂದು ಕೃಷಿಕರು ಆಗ್ರಹ ಮಾಡಿದ್ದಾರೆ.