ದೀಪಾವಳಿಯ ದಿನ ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.ಇದೇ ಸಮಯದಲ್ಲಿ ಕರ್ನಾಟಕ ಸೇರಿ ಹಲವು ಜಿಲ್ಲೆಗಳ ಕಲಾ ತಂಡಗಳು ನಗರದಲ್ಲಿ ರಾಮ್ ಲೀಲಾ ನಡೆಸಲಿವೆ. ಅಯೋಧ್ಯೆಯಲ್ಲಿ ನಿನ್ನೆಯಿಂದ ನವೆಂಬರ್ 5ರವರೆಗೆ ಅಂದರೆ, 5 ದಿನಗಳ ಕಾಲ ದೀಪಾವಳಿ ಆಚರಣೆ ಮಾಡಲಾಗುವುದು. ಇನ್ನು 3ನೇ ತಾರೀಖಿನಂದು ಸರಯೂ ನದಿ ದಡದಲ್ಲಿ 9 ಲಕ್ಷ ಹಣತೆ ಹಾಗೂ ನಗರದ ವಿವಿಧ ಭಾಗಗಳಲ್ಲಿ 3 ಲಕ್ಷ ದೀಪಗಳನ್ನು ಸಂಜೆ 6ರಿಂದ 6.30ರವರೆಗೆ ಬೆಳಗಿಸಲಾಗುವುದು. ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಅಸ್ಸಾಂ, ಪಶ್ಚಿಮ ಬಂಗಾಳದ ಕಲಾ ತಂಡಗಳು ರಾಮ್ ಲೀಲಾ ಪ್ರದರ್ಶನ ನೀಡಲಿವೆ.