ಈ ಬಾರಿ ಹಸಿರು ಪಟಾಕಿಗಳು ಬಲು ದುಬಾರಿ!

ಮಂಗಳವಾರ, 2 ನವೆಂಬರ್ 2021 (07:29 IST)
ಬೆಂಗಳೂರು : ರಾಜ್ಯದಲ್ಲಿ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಪಟಾಕಿ ದರ ಗ್ರಾಹಕರ ಜೇಬಿಗೆ ಹೊರೆಯಾಗಲಿದೆ.
ಸಾಗಣೆ ವೆಚ್ಚ, ರಾಸಾಯನಿಕ ಕಚ್ಚಾ ಪದಾರ್ಥ ಬೆಲೆ ಏರಿಕೆಯಿಂದಾಗಿ ಹಸಿರು ಪಟಾಕಿ ಬೆಲೆ ಶೇ.30ರಷ್ಟು ಏರಿಕೆಯಾಗಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಬಹುಪಾಲು ಹಸಿರು ಪಟಾಕಿ ಸಿದ್ಧವಾಗುತ್ತಿದ್ದು, ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು ಸೇರಿ ಪ್ರಮುಖ ನಗರಗಳಿಗೆ ಕೆಲವು ಡೀಲರ್ಗಳ ಮೂಲಕ ಹಂಚಿಕೆಯಾಗುತ್ತದೆ. ಹೋಲ್ ಸೇಲ್ ದರದಲ್ಲಿ ಸಿಗುವ ಪಟಾಕಿಗಳ ಸಾಗಣೆ ವೆಚ್ಚ ಹೊರೆಯಾಗುತ್ತಿದ್ದು, ಸ್ಟ್ರ್ಯಾಂಡರ್ಸ್ ಮತ್ತು ಕೃಷ್ಣ ಡೀಲರ್ ಶೇ.12, ಸೋನಿ, ಐಎನ್ ಶೇ.8.5ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಜತೆಗೆ, ಪಟಾಕಿ ಸರಬರಾಜಿಗೆ ಅಗತ್ಯ ಬೀಳುವ ಪ್ರತಿ ಸ್ಕ್ರಾಪ್ ಬಾಕ್ಸ್ಗಳಿಗೆ ಈ ಹಿಂದೆ 4 ರೂ.ನಂತೆ ಪಡೆಯಲಾಗುತ್ತಿತ್ತು. ಆದರೀಗ ಇದರ ಬೆಲೆ 12ರಿಂದ 18 ರೂ.ವರೆಗೆ ಹೆಚ್ಚಳವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ