ಗಣೇಶ ಹಬ್ಬ : ಪೊಲೀಸ್ ಇಲಾಖೆಯ ನಿಯಮಗಳೇನು?

ಶನಿವಾರ, 27 ಆಗಸ್ಟ್ 2022 (12:07 IST)
ಬೆಂಗಳೂರು : ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಕಳೆಗಟ್ಟಿತ್ತು. ಆದರೆ ಈ ಬಾರಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಅನೇಕರು ನಿರ್ಧರಿಸಿದ್ದಾರೆ.
 
ಆದರೆ ಗಣೇಶನನ್ನು ಕೂರಿಸಲು ಪೊಲೀಸ್ ಇಲಾಖೆಯಿಂದ ಹತ್ತಾರು ನಿಬಂಧನೆಗಳು ಸಿದ್ಧವಾಗಿದ್ದು, ಆಯೋಜಕರು ಕಟ್ಟುನಿಟ್ಟಿನ ನಿಬಂಧನೆಗಳನ್ನ ಫಾಲೋ ಮಾಡಬೇಕು. ಗಣೇಶನನ್ನು ಕೂರಿಸಲು ಇರುವ ನಿಬಂಧನೆಗಳು ಈ ರೀತಿಯಾಗಿವೆ.

ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು. ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು. ಶಾಮಿಯಾನಗೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬಹುದು.
ಆದರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ. ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರಗಳನ್ನು ಪೊಲೀಸರಿಗೆ ಕೊಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಪೊಲೀಸ್ ಹಾಗೂ ಬಿಬಿಎಂಪಿ ನಿಯಮದಂತೆ ಸಿಸಿಟಿವಿಗಳ ಅಳವಡಿಕೆ ಮಾಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಉಪಕರಣಗಳು ಇರಬೇಕು. ಮರಳು ತುಂಬಿದ ಬಕೆಟ್, ನೀರಿನ ವ್ಯವಸ್ಥೆ ಇರಬೇಕು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡಬಾರದು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಷಿನ್ ಇರಬೇಕು, ಸಮರ್ಪಕ ಬೆಳಕು, ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್, ಇತರ ಅವಘಡ ತಡೆಯಲು ಸನ್ನದ್ಧರಾಗಿರಬೇಕು. ಸಾರ್ವಜನಿಕರು ಬರಲು ಹೋಗಲು ಸಮರ್ಪಕ ಆಗಮನ ನಿರ್ಗಮನ ವ್ಯವಸ್ಥೆ ಇರಬೇಕು. ಬ್ಯಾರಿಕೇಡ್ ನಿರ್ಮಿಸಿ, ಸ್ವಯಂ ಸೇವಕರು ಇರಬೇಕು. ಜನ ಹೆಚ್ಚಾದರೆ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ