ಗಣೇಶೋತ್ಸವ ಅನುಮತಿ ಸೂಕ್ತ ಸಮಯದಲ್ಲಿ ನಿರ್ಧಾರ : ಅಶೋಕ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ವಿಚಾರವಾಗಿದೆ. ಅನುಮತಿ ಬೇಕು ಅಂತ ಈವರೆಗೂ ನನಗೆ ಯಾವುದೇ ಮನವಿಗಳು ಬಂದಿಲ್ಲ. ಡಿಸಿಗೆ ಮನವಿ ಕೊಟ್ಟಿದ್ದರೆ ಅವರು ಆ ಬಗ್ಗೆ ಸೂಕ್ತ ಸೂಚನೆ ಕೊಡುತ್ತಾರೆ ಎಂದು ತಿಳಿಸಿದರು.
75 ವರ್ಷಗಳ ಬಳಿಕ ಮೊದಲ ಬಾರಿಗೆ ಅಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುವ ನಿರ್ಧಾರ ಮಾಡಲಾಯಿತು. ಗಣರಾಜೋತ್ಸವ ಕೂಡಾ ಮಾಡುತ್ತೇವೆ. ಮುಂದೆ ಕನ್ನಡ ರಾಜ್ಯೋತ್ಸವ ಮಾಡಲು ಆದೇಶ ಹೊರಡಿಸುತ್ತೇನೆ ಎಂದು ತಿಳಿಸಿದರು.
ಅನುಮತಿ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.