ಜಿಡಿಪಿ ಬೆಳವಣಿಗೆ 13.5% ರಷ್ಟು ಏರಿಕೆ!

ಗುರುವಾರ, 1 ಸೆಪ್ಟಂಬರ್ 2022 (10:53 IST)
ನವದೆಹಲಿ : ಏಪ್ರಿಲ್ -ಜೂನ್ ಅವಧಿಯ ಜಿಡಿಪಿ(ಒಟ್ಟಾರೆ ದೇಶೀಯ ಉತ್ಪನ್ನ) ಬೆಳವಣಿಗೆ 13.5% ರಷ್ಟು ಏರಿಕೆಯಾಗಿದೆ.
 
ರಾಷ್ಟ್ರೀಯ ಅಂಕಿಅಂಶ ಕಚೇರಿ ಈ ಸಂಖ್ಯಾ ಮಾಹಿತಿಯನ್ನು  ಬಿಡುಗಡೆ ಮಾಡಿದೆ. 2021ರ ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 20.1% ರಷ್ಟು ಏರಿಕೆಯಾಗಿತ್ತು. 2020ರಲ್ಲಿ ಕೊರೊನಾ ಇದ್ದ ಕಾರಣ ಈ ಪ್ರಮಾಣದ ಏರಿಕೆಯಾಗಿತ್ತು.

ಏಪ್ರಿಲ್- ಜೂನ್ ಮೊದಲ ಹಣಕಾಸು ವರ್ಷದಲ್ಲಿ ಆರ್ಬಿಐ ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಎಂದು ಅಂದಾಜಿಸಿತ್ತು. 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಚೀನಾ 0.4% ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ