ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ

ಬುಧವಾರ, 22 ಫೆಬ್ರವರಿ 2023 (06:06 IST)
ಬೆಂಗಳೂರು : ರಾಜ್ಯ ಪೊಲೀಸರು ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟ್ವರ್ಕ್ ಬಿಟ್ಟು ರಿಲಯನ್ಸ್ ಜಿಯೋಗೆ ಪೋರ್ಟ್ ಆಗಲು ನಿರ್ಧರಿಸಿದ್ದಾರೆ.
 
ಪೊಲೀಸ್ ಇಲಾಖೆ ಬಳಸುತ್ತಿದ್ದ ಬಿಎಸ್ಎನ್ಎಲ್ ಸಿಮ್ಕಾರ್ಡ್ನಿಂದ ಮುಕೇಶ್ ಅಂಬಾನಿ ಒಡೆತನದ ಜಿಯೋಗೆ ಶಿಫ್ಟ್ ಆಗಲು ನಿರ್ಧರಿಸಲಾಗಿದೆ.

ಭಾರತ್ ಸಂಚಾರ ನಿಗಮ ನಿಯಮಿತ ರಾಜ್ಯಾದ್ಯಂತ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ, ಇದರಿಂದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಪೊಲೀಸ್ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು 38,347 ಸಿಮ್ಕಾರ್ಡ್ಗಳನ್ನು ಬದಲಾಯಿಸಲು ಸರ್ಕಾರ ಅನುಮತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ