Petrol Price Today: ಪ್ರತಿದಿನ ಮನೆಯಿಂದ ಹೊರಗೆ ಹೋಗಲು ಗಾಡಿ ತೆಗೆಯುವಾಗೆಲ್ಲಾ ಒಂದು ಕ್ಷಣ ಯೋಚಿಸುವಂಥಾ ಪರಿಸ್ಥಿತಿ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇ ದಿನೇ ಆಕಾಶಕ್ಕೆ ಏರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ನಿನ್ನೆಯಷ್ಟೇ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಪೆಟ್ರೋಲ್ ಬೆಲೆ ಸದ್ಯಕ್ಕೆ ವಿರಾಮ ತೆಗೆದುಕೊಂಡಂತೆ ಕಾಣುತ್ತಿದೆ.
ಇಂದು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇ 4ರ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತವಾಗಿ 38ನೇ ಬಾರಿಗೆ ಪೆಟ್ರೋಲ್ ಬೆಲೆ ಪ್ರತೀ ಲೀಟರ್ಗೆ 100ರೂಪಾಯಿ ಗಡಿ ದಾಟಿತ್ತು.
ಭಾರತ್ ಪೆಟ್ರೋಲಿಯಂ ಮೂಲಗಳ ಪ್ರಕಾರ ದೆಹಲಿಯಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ 100.95 ಇದ್ದು ಡೀಸೆಲ್ ಬೆಲೆ ರೂ 89.92 ಇದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲೂ ಇಂಧನ ಬೆಲೆಗಳು ಹೆಚ್ಚೂ ಕಡಿಮೆ ಇದೇ ರೀತಿಯಲ್ಲಿದೆ. ಸದ್ಯ
ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 106.97 ರೂಪಾಯಿಗಳಿದೆ. ಇಡೀ ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು ಮೊದಲು ಮುಂಬೈನಲ್ಲೇ. ಸದ್ಯ ಮುಂಬೈನಲ್ಲಿ ಡೀಸೆಲ್ ಬೆಲೆ ಪ್ರತೀ ಲೀಟರ್ಗೆ 97.5 ರೂಪಾಯಿಗಳಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 101.05 ರೂ ಇದ್ದರೆ ಡೀಸೆಲ್ ಪ್ರತೀ ಲೀಟರ್ಗೆ 93.01 ಇದೆ.
ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಒಡಿಶಾ, ಮಣಿಪುರ, ಸಿಕ್ಕಿಂ ಹಾಗೂ ಮಹಾರಾಷ್ಟ್ರದ ಹಲವು ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 111.83ರು ನಷ್ಟಿದೆ, ಡೀಸೆಲ್ ಬೆಲೆ 102.78ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು 75.55ಯುಎಸ್ ಡಾಲರ್(1 USಆ=74.49ರು) ಪ್ರತಿ ಬ್ಯಾರೆಲ್ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.
ಸದ್ಯ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟಿವೆ?
ಬೆಂಗಳೂರು: ಪೆಟ್ರೋಲ್ 104.29ರು- ಡೀಸೆಲ್ 95.26ರುನವದೆಹಲಿ: ಪೆಟ್ರೋಲ್ 100.95ರು- ಡೀಸೆಲ್ 89.88ರು
ಕೋಲ್ಕತಾ: ಪೆಟ್ರೋಲ್ 101.01ರು- ಡೀಸೆಲ್ 92.97ರು
ಮುಂಬೈ: ಪೆಟ್ರೋಲ್ 106.93ರು- ಡೀಸೆಲ್ 97.46ರು
ಚೆನ್ನೈ: ಪೆಟ್ರೋಲ್ 101.67ರು- ಡೀಸೆಲ್ 94.39ರು
ತಿರುವನಂತಪುರಂ: ಪೆಟ್ರೋಲ್ 103.14ರು- ಡೀಸೆಲ್ 96.70ರು
ಪಾಟ್ನ: ಪೆಟ್ರೋಲ್ 103.50ರು- ಡೀಸೆಲ್ 95.76ರು
ಹೈದರಾಬಾದ್: ಪೆಟ್ರೋಲ್ 104.86ರು- ಡೀಸೆಲ್ 97.96ರು
ನೋಯ್ಡಾ: ಪೆಟ್ರೋಲ್ 98.24ರು- ಡೀಸೆಲ್ 90.46ರು
ಜೈಪುರ: ಪೆಟ್ರೋಲ್ 107.60ರು- ಡೀಸೆಲ್ 98.89ರು