ಕಿರಿಯ ನಾಯಕನಾಗಿ ದಾಖಲೆ ಮಾಡಿದ ರಿಷಬ್ ಪಂತ್

ಭಾನುವಾರ, 11 ಏಪ್ರಿಲ್ 2021 (09:31 IST)
ಮುಂಬೈ: ಐಪಿಎಲ್ 14 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಲ್ಕನೇ ನಾಯಕ ಎಂಬ ದಾಖಲೆ ಬರೆದರು.


ನಿನ್ನೆ ನಡೆದ ಪಂದ್ಯದ ಮೂಲಕ ರಿಷಬ್ ಮೊದಲ ಬಾರಿಗೆ ತಮ್ಮ ಐಪಿಎಲ್ ತಂಡಕ್ಕೆ ನಾಯಕರಾದರು. ಶ್ರೇಯಸ್ ಐಯರ್ ಅನುಪಸ್ಥಿತಿಯಲ್ಲಿ ಈ ಋತುವಿನಲ್ಲಿ ಡೆಲ್ಲಿ ತಂಡ ರಿಷಬ್ ಗೆ ನಾಯಕತ್ವ ವಹಿಸಿದೆ.

ಇದರೊಂದಿಗೆ ರಿಷಬ್ ಹೊಸ ದಾಖಲೆಯನ್ನೂ ಮಾಡಿದರು. ಇದಕ್ಕೂ ಮೊದಲು ಅವರು ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿದ್ದರು. ಅದರ ಹೊರತಾಗಿ ಅವರಿಗೆ ನಾಯಕತ್ವದ ಅನುಭವ ಹೊಸದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ