ಪ್ರಯಾಣಿಕರಿಗೆ ಗುಡ್ನ್ಯೂಸ್: ಶೀಘ್ರವೇ ಫ್ಲೈಓವರ್ ಓಪನ್ ?

ಭಾನುವಾರ, 6 ಫೆಬ್ರವರಿ 2022 (07:01 IST)
ಬೆಂಗಳೂರು : ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ.

ಪೀಣ್ಯ ಫ್ಲೈಓವರ್ ರಿಪೇರಿ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.ಡಿಸೆಂಬರ್ ಕೊನೆಯ ವಾರದ ವೇಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ನೆಲಮಂಗಲ-ಗೊರಗುಂಟೆಪಾಳ್ಯ ಫ್ಲೈಓವರ್ನ 102-103ನೇ ಪಿಲ್ಲರ್ ನಡುವಿನ ಸ್ಲಾಬ್ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು.

ಅದನ್ನ ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್ನ ಸಂಚಾರವನ್ನ ನಿರ್ಬಂಧ ಮಾಡಿತ್ತು. ಪ್ರಾರಂಭದಲ್ಲಿ ಒಂದೇ ವಾರಕ್ಕೆ ದುರಸ್ಥಿ ಕಾರ್ಯ ಮುಗಿಸುವುದಾಗಿ ಹೇಳಿದ್ದ ಅಧಿಕಾರಿಗಳು ತಿಂಗಳಾದರೂ ರಿಪೇರಿ ಕಾರ್ಯ ಮುಗಿಸಿರಲಿಲ್ಲ. ಆದರೆ ಸದ್ಯ ಈಗ ಸಂಪೂರ್ಣ ರಿಪೇರಿ ಕಾರ್ಯ ಮುಗಿದಿದ್ದು, ತಾಂತ್ರಿಕ ದೋಷ ಇದ್ದ ಪಿಲ್ಲರ್ ಗಳಿಗೆ ಸಪೋರ್ಟಿವ್ ಲಿಂಕ್ ಅಳವಡಿಸಿದ್ದಾರೆ.

ಫೈನಲ್ ಆಗಿ ದೆಹಲಿ ಎಂಜಿನಿಯರ್ಗಳ ತಂಡ ಫ್ಲೈಓವರ್ ದುರಸ್ತಿ ಕಾರ್ಯ ಪರಿಶೀಲನೆ ಮಾಡಿ ಓಕೆ ಮಾಡೋದೊಂದೆ ಬಾಕಿ. ಈ ವಾರವೇ ದೆಹಲಿ ಇಂಜಿನಿಯರ್ಸ್ ಪರಿಶೀಲನೆ ನಡೆಸಿ ಸಂಚಾರಕ್ಕೆ ಓಕೆ ಅಂದ್ರೆ, ಮುಂದಿನ ಬುಧವಾರ ಅಥವಾ ಗುರುವಾರದಿಂದ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ