ಚೀನಾದ ನಾಗರಿಕರಿಗೆ ಸರ್ಕಾರ ಸೂಚನೆ?

ಸೋಮವಾರ, 19 ಸೆಪ್ಟಂಬರ್ 2022 (08:23 IST)
ಬೀಜಿಂಗ್ : ಮಂಕಿಪಾಕ್ಸ್ ಸೋಂಕನ್ನು ತಪ್ಪಿಸಲು ವಿದೇಶಿಯರು ಮತ್ತು ವಿದೇಶದಿಂದ ಇತ್ತೀಚೆಗೆ ಹಿಂದಿರುಗಿದವರ ಸಂಪರ್ಕದಿಂದ ದೂರವಿರಲು ನಾಗರಿಕರಿಗೆ ಚೀನಾದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ.
 
ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯು ಕೊರೊನಾ ಕ್ವಾರಂಟೈನ್ನಲ್ಲಿರುವಾಗ ಆತನಿಗೆ ಮಂಕಿಪಾಕ್ಸ್ನ ಕೆಲ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಚಾಂಗ್ಕಿಂಗ್ ನಗರದಲ್ಲಿ ಮಂಕಿಪಾಕ್ಸ್ನ ಮೊದಲ ಪ್ರಕರಣ ವರದಿ ಆಗಿದೆ.

ಈ ಹಿನ್ನೆಲೆಯಲ್ಲಿ ಚೀನಾ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಅಲ್ಲಿನ ನಾಗರಿಕರಿಗೆ ಸೂಚಿಸಿದೆ. ಮಂಕಿಪಾಕ್ಸ್ ಸೋಂಕು ದೇಶಾದ್ಯಂತ ಹರಡುವುದನ್ನು ತಪ್ಪಿಸಲು ವಿದೇಶಿಗರನ್ನು ಹಾಗೂ ಕಳೆದ ಮೂರು ವಾರಗಳ ವಿದೇಶದಿಂದ ಹಿಂದಿರುಗಿದವರನ್ನು ಸ್ಪರ್ಶಿಸಬಾರದು.

ಅಪರಿಚಿತರನ್ನು ಸ್ಪರ್ಶಿಸಬೇಡಿ, ಹೋಟೆಲ್ಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚು ಬಳಸಬೇಡಿ, ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಟಾಯ್ಲೆಟ್ ಸೀಟ್ನಲ್ಲಿ ಕವರನ್ನು ಬಳಸಲು ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ