ಶಾಲೆಯಲ್ಲಿ 79 ಮಕ್ಕಳಲ್ಲಿ ಸೋಂಕು ದೃಢ- ಶಾಲೆ ಮುಚ್ಚಲು ಸರ್ಕಾರದ ಆದೇಶ

ಬುಧವಾರ, 22 ಸೆಪ್ಟಂಬರ್ 2021 (11:50 IST)
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬೋರ್ಡಿಂಗ್ ಶಾಲೆಯಲ್ಲಿ ಎಪ್ಪತ್ತೊಂಬತ್ತು ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿಗಳಲ್ಲಿ  ಕೊರೊನಾ ಸೋಂಕು ದೃಢವಾಗಿದ್ದು, ಕಳವಳಕಾರಿಯಾಗಿದೆ.  ಹಿಮಾಚಲ ಪ್ರದೇಶ ಸರ್ಕಾರ ನೀಡಿದ ಆದೇಶವನ್ನು ಉಲ್ಲೇಖಿಸಿ ವಸತಿ ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳು ಸೆಪ್ಟೆಂಬರ್ 25 ರವರೆಗೆ ಮುಚ್ಚಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವಸತಿ ಶಾಲೆಗಳಿಗಾಗಿ,  ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಸರಿಸಲಾಗುವುದು ಎಂದು ಸರ್ಕಾರದ  ಆದೇಶದಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶಾಲೆಗಳಲ್ಲಿ ಹಾಜರಾಗುವುದನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಸೆಪ್ಟೆಂಬರ್ 21 ರವರೆಗೆ ಶಾಲೆಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು.  ಈಗಾಗಲೇ ದೇಶದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದೆ.  ಅದರಲ್ಲು ತಜ್ಞರ ವರದಿಯ ಪ್ರಕಾರ ಈ ಬಾರಿ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸುಕೊಳುತ್ತದೆ ಎಂದು ಹೇಳಲಾಗುತ್ತದೆ.
ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಹೆಚ್ಚು ಮಕ್ಕಳಲ್ಲಿ ಪ್ರಕರಣ ವರದಿಯಾಗುತ್ತಿದೆ. ಕೊರೊನಾ ಎರೆಡನೆ ಅಲೆಯ ನಂತರ ಕರ್ನಾಟಕದಲ್ಲಿ ಸಹ ಶಾಲಾ ಕಾಲೇಜುಗಳನ್ನು ಆರಂಭಿಸಿದ್ದು, ರಾಜ್ಯದ ಮಕ್ಕಳಲ್ಲಿ ಸಹ ಭೀತಿ ಎದುರಾಗಿದೆ. ರಾಜ್ಯದಲ್ಲೀ ಕೂಡ ಡೆಂಗ್ಯೂ ಆರ್ಭಟ ಜೋರಾಗಿದ್ದು, ಹಲವು ಮಕ್ಕಳಲ್ಲಿ ವೈರಲ್ ಜ್ವರ ಸಹ ಕಾಣಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಕಳೆದ 20 ದಿನಗಳಿಂದ ಬಹುತೇಕ ಮಕ್ಕಳು ಕಫ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೋನಾ ಆತಂಕ ಮನೆ ಮಾಡಿದೆ. ಅತ್ತ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಇತ್ತ ಮಕ್ಕಳಿಗೆ ಹೆಚ್ಚೆಚ್ಚು ಸೋಂಕು ತಗುಲುತ್ತಿದೆ. ಅಧಿಕ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು, ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಅಭಿಪ್ರಾಯ ನಿಜವಾಗ್ತಿದ್ಯೇನೋ ಎನ್ನುವ ಅನುಮಾನ ಮೂಡಿಸಿದೆ
ಶಾಲೆ ಪುನರ್ ಆರಂಭವಾದ ಹಿನ್ನಲೆ ದಿನವೊಂದಕ್ಕೆ ಏನಿಲ್ಲಾ ಎಂದರೂ ಸೋಂಕಿನಿಂದಾಗಿ ಸುಮಾರು 300 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಶಾಲೆಗಳು ವಾರದಲ್ಲಿ ಎರಡು ಬಾರಿ ಮಕ್ಕಳ ಪರೀಕ್ಷೆ ನಡೆಸಬೇಕು. ಜೊತೆಗೆ ವಿದ್ಯಾರ್ಥಿಗಳು ಹೆಚ್ಚು ಗುಂಪುಗೂಡದಂತೆ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯವಾಗಿದೆ .
ಮೂರನೇ ಅಲೆ ಸೋಂಕು ಅಥವಾ ಡೆಲ್ಟಾ ಸೋಂಕುಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನಲೆ ಕೋವಿಡ್ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ನೀಡುವುದು ಅವಶ್ಯವಾಗಿದ್ದು, ಈಗಾಗಲೇ ಮಕ್ಕಳ ಲಸಿಕೆಗೆ ಅನೇಕ ಔಷಧ ಕಂಪನಿಗಳು ಪ್ರಯೋಗ ನಡೆಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ