ನವದೆಹಲಿ : ಈ ಬಾರಿ ಅಕ್ಟೋಬರ್ ತಿಂಗಳಲ್ಲಿ 1.52 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿದ್ದು, ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ 2ನೇ ಬಾರಿಗೆ ಅತಿಹೆಚ್ಚಿನ ಜಿಎಸ್ಟಿ ಸಂಗ್ರವಾಗಿದೆ ಎಂದು ಕೇಂದ್ರಿಯ ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ 1.68 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಸೆಪ್ಟಂಬರ್ನಲ್ಲಿ 1.48 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದೀಗ ಅಕ್ಟೋಬರ್ ತಿಂಗಳಲ್ಲಿ 1.52 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದು 2ನೇ ಬಾರಿಗೆ ದಾಖಲೆಯ ಸಂಗ್ರಹವಾಗಿದೆ.
ಅಕ್ಟೋಬರ್ 2022ರಲ್ಲಿ ಒಟ್ಟು 1,51,718 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಲಾಗಿದೆ. ಇದರಲ್ಲಿ ಕೇಂದ್ರ ಜಿಎಸ್ಟಿ 26,039 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್ಟಿ (ಉSಖಿ) 33,396 ಕೋಟಿ ರೂ.,
ಇಂಟಿಗ್ರೇಟೆಡ್ ಜಿಎಸ್ಟಿ 81,778 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 37,297 ಕೋಟಿ ರೂ. ಸೇರಿ), ಸೆಸ್ 10,505 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 825 ಕೋಟಿ ರೂ. ಸೇರಿ) ಸೇರಿವೆ. ಇದು ಇಲ್ಲಿಯವರೆಗಿನ 2ನೇ ಅತಿ ಹೆಚ್ಚು ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.