ಜಿಎಸ್ಟಿ ಇಂದಿಗೆ ಒಂದು ವರ್ಷ; ದೇಶದ ಜನತೆಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಭಾನುವಾರ, 1 ಜುಲೈ 2018 (14:16 IST)
ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಜಿಎಸ್ಟಿ ಯಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ. ‘ಜಿಎಸ್ಟಿ ದೇಶದಲ್ಲಿ ಅಭಿವೃದ್ಧಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಉತ್ಪಾದನೆ ಹೆಚ್ಚಳವಾಗಿದೆ, ಉದ್ಯಮ ಸ್ನೇಹಿ ವಾತಾವರಣ ಮತ್ತಷ್ಟು ಉತ್ತಮವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಇದರಿಂದ ಲಾಭವಾಗಿದೆ,’ ಎಂದು ಪ್ರಧಾನಿ ಮೋದಿ ತಮ್ಮ  ಟ್ಟೀಟ್ ನಲ್ಲಿ ತಿಳಿಸಿದ್ದಾರೆ.


ಜಿಎಸ್ಟಿಗೆ ಒಂದು ವರ್ಷ ತುಂಬಿದ ಈ ವಿಶೇಷ ಸಂದರ್ಭದಲ್ಲಿ ‘ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜಿಎಸ್ಟಿ ಒಕ್ಕೂಟ ವ್ಯವಸ್ಥೆಯ ಪರಸ್ಪರ ಸಹಕಾರ ಮತ್ತು ಟೀಮ್ ಇಂಡಿಯಾ ಸ್ಪಿರಿಟ್ ಗೆ ರೋಮಾಂಚಕ ಉದಾಹರಣೆ, ಜಿಎಸ್ಟಿ ಭಾರತೀಯ ಆರ್ಥಿಕತೆಯಲ್ಲಿ ಧನಾತ್ಮಕ ಬದಲಾವಣೆ ತಂದಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ