ಇಂದಿರಾ ಗಾಂಧಿ ವಿರುದ್ಧ ಮಾತನಾಡಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
ಬುಧವಾರ, 27 ಜೂನ್ 2018 (09:13 IST)
ನವದೆಹಲಿ: ತುರ್ತು ಪರಿಸ್ಥಿತಿ ದಿನಗಳಿಗೆ 43 ವರ್ಷ ತುಂಬಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಸರ್ವಾಧಿಕಾರಿಗೆ ಹೋಲಿಸಿದ್ದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಇಂದಿರಾ ಗಾಂಧಿ ಸರ್ವೋನ್ನತ ನಾಯಕಿ. ಆಕೆಯ ಬಗ್ಗೆ ತಪ್ಪಾಗಿ ಮಾತನಾಡಿ ಪ್ರಧಾನಿ ಮೋದಿ, ಜೇಟ್ಲಿ ಇತಿಹಾಸವನ್ನೇ ತಿರುಚಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರಜಾಪ್ರಭುತ್ವವನ್ನು ಉಳಿಸಲು ಬೇರೆ ದಾರಿಯಿಲ್ಲದೇ ಇಂದಿರಾ ತುರ್ತು ಪರಿಸ್ಥಿತಿ ಹೇರಿದರು. ಆ ಬಳಿಕ ಅವರೇ ಅದರ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದರು. ಬಳಿಕ ಚುನಾವಣೆ ನಡೆಸಲು ತುರ್ತು ಪರಿಸ್ಥಿತಿ ಹಿಂಪಡೆದರು. ಬಳಿಕ ತಾವೇ ಸೋತರು. ಆ ಸೋಲನ್ನು ಅವರು ಸ್ವೀಕರಿಸಿದ್ದರು’ ಎಂದು ಆನಂದ್ ಶರ್ಮಾ ಇಂದಿರಾ ಗಾಂಧಿಯವರನ್ನು ಸಮರ್ಥಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.