ಭಾರತದ ಅರ್ಧದಷ್ಟು ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದಿವೆ: ಶಿಕ್ಷಣ ಸಚಿವಾಲಯ
ಗುರುವಾರ, 12 ಆಗಸ್ಟ್ 2021 (13:56 IST)
Education Ratio in India: ಉತ್ತರ ಪ್ರದೇಶ ನಂತರ ಮಧ್ಯಪ್ರದೇಶ (39), ರಾಜಸ್ಥಾನ (30), ತಮಿಳುನಾಡು (27) ಮತ್ತು ಬಿಹಾರ (25) ರಾಜ್ಯಗಳೂ ಹೆಚ್ಚಿನ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳನ್ನು ಒಳಗೊಂಡಿದೆ. ಭಾರತದ ಒಟ್ಟು 718 ಜಿಲ್ಲೆಗಳಲ್ಲಿ ಕನಿಷ್ಠ 374 ಜಿಲ್ಲೆಗಳನ್ನು "ಶೈಕ್ಷಣಿಕವಾಗಿ ಹಿಂದುಳಿದ" ಜಿಲ್ಲೆಗಳು ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ರಾಜ್ಯಗಳಲ್ಲಿ, ಉತ್ತರ ಪ್ರದೇಶವು 41 ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳನ್ನು (EBD) ಹೊಂದಿದ್ದು, ರಾಜ್ಯದ ಒಟ್ಟು ಜಿಲ್ಲೆಗಳಲ್ಲಿ ಸುಮಾರು 55 ಪ್ರತಿಶತದಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಈ ಪೈಕಿ ಬಹ್ರೈಚ್, ಬಲರಾಂಪುರ್, ಹತ್ರಾಸ್, ಕನೌಜ್, ಮುಜಾಫರ್ ನಗರ, ಪಿಲಿಭಿತ್, ರಾಂಪುರ, ಸಹರಾನ್ ಪುರ, ಶಹಜಹಾನ್ ಪುರ ಮತ್ತು ಶ್ರಾವಸ್ತಿ ಜಿಲ್ಲೆಗಳನ್ನು ಒಳಗೊಂಡಿವೆ. ಉತ್ತರ ಪ್ರದೇಶ ನಂತರ ಮಧ್ಯಪ್ರದೇಶ (39), ರಾಜಸ್ಥಾನ (30), ತಮಿಳುನಾಡು (27) ಮತ್ತು ಬಿಹಾರ (25) ರಾಜ್ಯಗಳೂ ಹೆಚ್ಚಿನ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳನ್ನು ಒಳಗೊಂಡಿದೆ.
ಮಧ್ಯಪ್ರದೇಶದ ಬೇತುಲ್, ಭಿಂದ್, ಛತರ್ಪುರ್, ಡಾಟಿಯಾ, ಗುಣ, ಹರ್ದಾ, ಮಂದಸೌರ್, ಮೊರೆನಾ, ರತ್ಲಾಮ್, ಸಾಗರ್, ಮತ್ತು ಸತ್ನಾ ಹಾಗೂ ರಾಜಸ್ಥಾನದ ಅಜ್ಮೇರ್, ಆಲ್ವಾರ್, ಬಾರ್ಮರ್, ಚಿತ್ತೌರ್ಘರ್, ಚುರು, ಜೈಸಲ್ಮೇರ್ ಮತ್ತು ಜಲೋರ್ ಸಹ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳ ಭಾಗವಾಗಿದೆ.
ತಮಿಳುನಾಡಿನಲ್ಲಿ, ಅರಿಯಲೂರು, ಈರೋಡ್, ಕಾಂಚೀಪುರಂ, ಕನ್ಯಾಕುಮಾರಿ, ಸೇಲಂ, ತಿರುವರೂರು ಮತ್ತು ವೆಲ್ಲೂರು ಸಹ EBD ಗಳಲ್ಲಿ ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಹಾಗೂ ಬಿಹಾರದ ಅರಾರಿಯಾ, ಔರಂಗಾಬಾದ್, ಬೇಗುಸರೈ, ದರ್ಭಾಂಗ್, ಕಿಶನ್ ಗಂಜ್, ಮಧುಬನಿ, ಸೀತಾಮರ್ಹಿ, ಸಿವಾನ್ ಮತ್ತು ವೈಶಾಲಿ ಸಹ ಇಬಿಡಿಗಳಲ್ಲಿ ಕೆಲವು ಜಿಲ್ಲೆಗಳು ಎಂದು ತಿಳಿದುಬಂದಿದೆ.
"ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ರಚಿಸಿದ ತಜ್ಞರ ಸಮಿತಿಯು ಒಟ್ಟು ದಾಖಲಾತಿ ಅನುಪಾತ, ಕಾಲೇಜು-ಜನಸಂಖ್ಯೆ ಅನುಪಾತ ಮತ್ತು ಪ್ರತಿ ಕಾಲೇಜಿಗೆ ಸರಾಸರಿ ದಾಖಲಾತಿ ಸೇರಿದಂತೆ ವಿವಿಧ ಶೈಕ್ಷಣಿಕ ನಿಯತಾಂಕಗಳನ್ನು ಆಧರಿಸಿ 374 ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿದೆ" ಎಂದು ಸಚಿವಾಲಯ ಹೇಳಿದೆ.
ನಾಗಾಲ್ಯಾಂಡ್, ಲಕ್ಷದ್ವೀಪ, ಪುದುಚೆರ್ರಿ, ದಾದರ್ ಮತ್ತು ನಗರ್ ಹಾವೇಲಿ ತಲಾ ಒಂದು EBD ಹೊಂದಿದ್ದರೆ, ಡಿಯು ಮತ್ತು ಡಮನ್, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಉತ್ತರಾಖಂಡದಲ್ಲಿ ತಲಾ ಎರಡು ಇಬಿಡಿಗಳಿವೆ. ಸಿಕ್ಕಿಂ, ತ್ರಿಪುರಾ, ಕೇರಳ, ಮತ್ತು ಹಿಮಾಚಲ ಪ್ರದೇಶಗಳು ತಲಾ ನಾಲ್ಕು ಇಬಿಡಿಗಳನ್ನು ಹೊಂದಿವೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಕೆಲವು ವರ್ಷಗಳಲ್ಲಿ, ಒಟ್ಟು ದಾಖಲಾತಿ ಅನುಪಾತ (GER) ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ. GER ಎನ್ನುವುದು ಅರ್ಹ ವಯಸ್ಸಿನ ಗುಂಪಿನಲ್ಲಿರುವ ಜನಸಂಖ್ಯೆಗೆ ನಿರ್ದಿಷ್ಟ ಮಟ್ಟದ ಶಿಕ್ಷಣದಲ್ಲಿ ದಾಖಲಾತಿಯ ಅನುಪಾತವಾಗಿದೆ. ಹೆಚ್ಚಿನ GER ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಭಾಗವಹಿಸುವಿಕೆಯನ್ನು ಸೂಚಿಸುತ್ತದೆ. ಇನ್ನು, ಸಚಿವಾಲಯದ ದತ್ತಾಂಶವು ಪ್ರಾಥಮಿಕ ಶಿಕ್ಷಣದ GER 2015-2020ರ ನಡುವೆ ಕುಸಿದಿದೆ ಎಂದು ತೋರಿಸುತ್ತದೆಯಾದರೂ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವು ಅಲ್ಪ ಹೆಚ್ಚಳ ವರದಿ ಮಾಡಿದೆ. ಮತ್ತೊಂದೆಡೆ, ಉನ್ನತ ಶಿಕ್ಷಣದ ವಿಷಯದಲ್ಲಿ, ಜಿಇಆರ್ 2015-16ರಲ್ಲಿ 24.5 ರಿಂದ 2019-20ರಲ್ಲಿ 27.1 ಕ್ಕೆ ಏರಿದೆ. ಅದೇ ಅವಧಿಯಲ್ಲಿ ಮಾಧ್ಯಮಿಕ ಶಿಕ್ಷಣ 48.3 ರಿಂದ 51.4ಕ್ಕೆ ಏರಿಕೆಯಾಗಿದೆ.
EBDಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
"ಶಾಲೆಯ ಎಲ್ಲಾ ಹಂತಗಳಲ್ಲಿ ಲಿಂಗ ಅಂತರ ಕಡಿಮೆ ಮಾಡಲು, ದೇಶದಲ್ಲಿ 5,726 ಕೆಜಿಬಿವಿಗಳನ್ನು (ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ) ಮಂಜೂರು ಮಾಡಲಾಗಿದೆ. 194 ಜಿಲ್ಲೆಗಳಲ್ಲಿ ಮಾದರಿ ಪದವಿ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ, ಈ ಪೈಕಿ ಯುಜಿಸಿ 64 ಮತ್ತು 130 ಎಂಡಿಸಿಗಳನ್ನು ರಾಷ್ಟ್ರೀಯ ಉಚ್ಚತಾರ್ ಶಿಕ್ಷಾ ಅಭಿಯಾನ(RUSA)ಕೇಂದ್ರ ಪ್ರಾಯೋಜಿತ ಯೋಜನೆಯಡಿ ಮಂಜೂರು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ