ಹಂಗೇರಿಯಲ್ಲಿ ಸ್ಪರ್ಧಿಸಿದ ನಂತರ ನೇರವಾಗಿ ಟೋಕಿಯೊಗೆ ಬಂದಿದ್ದ ವಿನೀತ್ ಪೋಗಟ್, ಉಳಿದ ಭಾರತೀಯ ಸ್ಪರ್ಧಿಗಳ ಜೊತೆ ಉಳಿದುಕೊಳ್ಳಲು ನಿರಾಕರಿಸಿದ್ದರು. ಸಹದ್ಯೋಗಿ ಕುಸ್ತಿಪಟುಗಳ ಜೊತೆ ಅಭ್ಯಾಸ ನಡೆಸಲು ನಿರಾಕರಿಸಿದ್ದರು. ಅಲ್ಲದೇ ಭಾರತೀಯ ಕ್ರೀಡಾಪಟುಗಳ ಪ್ರಯೋಜಕರ ಬ್ಯಾಡ್ಜ್ ಧರಿಸಲು ನಿರಾಕರಿಸಿದ್ದರು.
ವಿನೀತ್ ಪೋಗಟ್ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುಂಡು ಹೊರಬಿದ್ದಿದ್ದರು. ಸೋಲಿನ ಬಗ್ಗೆ ಉತ್ತರ ನೀಡುವಂತೆ ಆಗಸ್ಟ್ 16ರೊಳಗೆ ಉತ್ತರ ನೀಡುವಂತೆ ಭಾರತೀಯ ಕುಸ್ತಿ ಸಂಸ್ಥೆ ಸೂಚಿಸಿದೆ.