ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

ಸೋಮವಾರ, 21 ನವೆಂಬರ್ 2022 (08:12 IST)
ಮಂಗಳೂರು : ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮೃದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಉಗ್ರರ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡಾಗಿದೆ.

ಜಲಮಾರ್ಗ, ವಾಯು ಮಾರ್ಗ, ರೈಲ್ವೇ ಬಳಸಿ ಉಗ್ರರು  ವಿಧ್ವಂಸಕ ಕೃತ್ಯ ನಡೆಸಲು ಮಂಗಳೂರನ್ನು ಪ್ರಸಕ್ತ ಜಾಗ ಮಾಡಿಕೊಂಡಿದ್ದಾರೆ. ಬಂದರು ನಗರಿಯ ಮೇಲೆ ಉಗ್ರ ಚಟುವಟಿಕೆ ಕರಿನೆರಳು ಆವರಿಸಿಕೊಳ್ಳಲು ಒಂದು ಕಾರಣವಿದೆ.

ಕಡಲತಡಿ, ಬಂದರು ನಗರಿ ಪ್ರವಾಸೋದ್ಯಮದ ಜಿಲ್ಲೆ ಎಂಬ ಖ್ಯಾತಿ ಪಡೆದಿತ್ತು. ಏರ್ಪೋರ್ಟ್, ರೈಲು ಸಂಪರ್ಕ ಮತ್ತು ಬಂದರನ್ನು ಒಳಗೊಂಡಂತೆ ವಾಣಿಜ್ಯ ನಗರಿಯಾಗಿ ಮಂಗಳೂರು ಅಗಾಧವಾಗಿ ಬೆಳೆದಿತ್ತು.

ಇಂತಹ ಮಂಗಳೂರಿಗೆ ಈಗ ಉಗ್ರರ ಕರಿ ನೆರಳು ಚಾಚಿದೆ. ಕಳೆದ ಹಲವಾರು ವರ್ಷಗಳಿಂದ ದೇಶದ್ರೋಹಿ ಚಟುವಟಿಕೆಗಳು ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಶುರುವಾಗಿದೆ. ಅರಬ್ಬಿ ಸಮುದ್ರದ ತಟದ ನಗರವನ್ನು ವಿದ್ವಂಸಕ ಕೃತ್ಯಗಳಿಗೆ ಬಳಸಲು ಶುರು ಮಾಡಿದ್ದಾರೆ.

ಪಕ್ಕದಲ್ಲಿ ಕೇರಳ ರಾಜ್ಯ ಇರುವುದರಿಂದ ದುಷ್ಕೃತ್ಯಗಳನ್ನು ಕರ್ನಾಟಕದ ಗಡಿ ಜಿಲ್ಲೆಗೂ ವಿಸ್ತರಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ