ಶಾಲಾ-ಕಾಲೇಜುಗಳು ಬಂದ್!

ಶುಕ್ರವಾರ, 26 ನವೆಂಬರ್ 2021 (13:29 IST)
ಚೆನ್ನೈ : ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆ ಶುರುವಾಗಿದ್ದು, ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತೂತುಕುಡಿ, ತಿರುನೆಲ್ವೆಲಿ, ರಾಮನಾಥಪುರಂ, ಪುದುಕ್ಕೊಟ್ಟೈ, ನಾಗಪಟ್ಟಣಂ ಜಿಲ್ಲೆಗಳಲ್ಲಿ ಇಂದು ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ವ್ಯಾಪಕ ಮಳೆಗೆ ತಮಿಳುನಾಡು ತತ್ತರಿಸಿದೆ.
ಚೆನ್ನೈ, ಕನ್ನಿಯಾಕುಮಾರಿ, ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ, ತಂಜಾವೂರು, ಪೆರಂಬಲೂರು, ತಿರುಚಿರಾಪಳ್ಳಿ, ಥೇಣಿ, ದಿಂಡಿಗಲ್, ರಾಮನಾಥಪುರಂ, ಅರಿಯಲೂರ್, ವಿರುದುನಗರ, ಪುದುಕ್ಕೊಟ್ಟೈ, ತೂತುಕುಡಿ, ತಿರುನೆಲ್ವೇಲಿ, ತಿರುನೆಲ್ವೇಲಿ, ತಿರುನೆಲ್ವೇಲಿ, ವಿರುದುನಗರ ಸೇರಿದಂತೆ 25 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ತಮಿಳುನಾಡಿನ ತೂತುಕುಡಿ ಮತ್ತು ರಾಮನಾಥಪುರಂ ಜಿಲ್ಲೆಗಳು ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ತೂತುಕುಡಿಯ ತಿರುಚೆಂದೂರ್ ದೇವಾಲಯದ ಸುತ್ತಲೂ ಸಂಪೂರ್ಣ ಜಲಾವೃತಗೊಂಡಿರುವ ವಿಡಿಯೋಗಳು ವೈರಲ್ ಆಗಿತ್ತು.
 ಇಂದು ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ