ಪಾಸಿಟಿವಿಟಿ ಭಾರಿ ಇಳಿಕೆ

ಶನಿವಾರ, 12 ಫೆಬ್ರವರಿ 2022 (09:16 IST)
ಬೆಂಗಳೂರು : ರಾಜ್ಯದ  ಕೋವಿಡ್-19ರ  ಪಾಸಿಟಿವಿಟಿ ದರದಲ್ಲಿ  ಭಾರಿ ಇಳಿಕೆ ದಾಖಲಾಗುತ್ತಿದೆ.
 
ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

ಒಮಿಕ್ರೋನ್ ಪ್ರೇರಿತ ಮೂರನೇ ಅಲೆಯಲ್ಲಿ ಜನವರಿ 8 ರಂದು ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.5 ದಾಟಿತ್ತು. ಅಲ್ಲಿಂದ ಬಳಿಕ ಏರುತ್ತ ಸಾಗಿದ್ದ ಪಾಸಿಟಿವಿಟಿ ದರ ಜನವರಿ 24ಕ್ಕೆ ಮೂರನೇ ಅಲೆಯ ಗರಿಷ್ಠ ಶೇ.32.95 ತಲುಪಿತ್ತು. ತದನಂತರ ಇಳಿಕೆ ಹಾದಿಯಲ್ಲಿ ಸಾಗಿದ ಪಾಸಿಟಿವಿಟಿ ದರ ಫೆ.9ಕ್ಕೆ ಮೊದಲ ಬಾರಿಗೆ ಶೇ.5 ರೊಳಗೆ ಬಂದಿದೆ.

ರಾಜ್ಯದಲ್ಲಿ ಸದ್ಯ ಐದಾರು ಜಿಲ್ಲೆಗಳಲ್ಲಿ ಮಾತ್ರ ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದೆ. ಫೆ. 10ರ ಮಾಹಿತಿಯಂತೆ ಶಿವಮೊಗ್ಗ (ಶೇ.8.41), ತುಮಕೂರು (ಶೇ. 7.62), ಕೊಡಗು (ಶೇ.7.14), ಬಳ್ಳಾರಿ (ಶೇ. 6.65), ಮೈಸೂರು (ಶೇ.5.95), ಚಾಮರಾಜನಗರ ಜಿಲ್ಲೆ (ಶೇ. 5.6)ಯಲ್ಲಿ ಮಾತ್ರ ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ.

ಉಳಿದೆಲ್ಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮಂಡ್ಯ (ಶೇ. 1.99), ರಾಯಚೂರು (ಶೇ. 1.86), ದಾವಣಗೆರೆ (ಶೇ. 1.8), ದಕ್ಷಿಣ ಕನ್ನಡ (ಶೇ. 1.75), ಕೊಪ್ಪಳ (ಶೇ. 1.68), ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ (ಶೇ. 1.56), ಪಾಸಿಟಿವಿಟಿ ದರ ಶೇ.2 ಕ್ಕಿಂತ ಕೆಳಕ್ಕಿಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ