ಆನ್ಲೈನ್ ಶಾಪಿಂಗ್ ಮುನ್ನ ಹುಷಾರ್!

ಶುಕ್ರವಾರ, 12 ನವೆಂಬರ್ 2021 (20:29 IST)
ಪ್ರತಿಬಾರಿ ಆನ್ಲೈನ್ ಶಾಪಿಂಗ್ ಮಾಡುವಾಗ ನೂರು ಬಾರಿ ಯೋಚಿಸಿ ಮಾಡಬೇಕು. ಯಾಕಂದರೆ ಆನ್ಲೈನ್ ಶಾಪಿಂಗ್ನಲ್ಲೇ ಹೆಚ್ಚು ವಂಚನೆ ನಡೆಯುತ್ತೆ.
ಆನ್ಲೈನ್ನಲ್ಲಿ ಕಣ್ಣಿಗೆ ಕಂಡಿದ್ದೆಲ್ಲ ಪರ್ಚೆಸ್ ಮಾಡೋಣ ಅನ್ನಿಸುತ್ತೆ. ಅನ್ನಿಸದ ತಕ್ಷಣ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬುಕ್ ಮಾಡಿ ಪೇಮೆಂಟ್ ಕೂಡ ಕೊಟ್ಟಿರುತ್ತೀರಾ. ಆದರೆ ಪ್ರಾಡೆಕ್ಟ್ ಮಾತ್ರ ಡೆಲಿವರಿ ಆಗೋದಿಲ್ಲ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯ ಪರ್ಸೆನಲ್ ಮಾಹಿತಿಯೂ ಸೋರಿಕೆಯಾಗಿರುತ್ತೆ. ಹೌದು, ಪ್ರತಿದಿನ, ಪ್ರತಿ ಗಂಟೆಗೊಮ್ಮೆ ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಈ ಹೆಣ್ಣುಮಕ್ಕಳು ಅಂಗಡಿ ಹೋದರೆ ಕಂಡಿದ್ದು ಬೇಕು ಅನ್ನುತ್ತಾರೆ. ಇನ್ನೂ ಕೈನಲ್ಲೇ ಪ್ರಂಪಚದಲ್ಲಿರುವುದೆಲ್ಲ ಬುಕ್ ಮಾಡಿ ಖರೀದಿಸಬಹುದು ಎಂದರೆ ಬಿಡುವ ಮಾತೇ ಇಲ್ಲ.  ಪ್ರತಿ ದಿನ ಆನ್ಲೈನ್ನಲ್ಲಿ ಏನಾದರೂ ಖರೀದಿಸದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಹೌದು, ಇದೇ ರೀತಿ ಯುವತಿಯೊಬ್ಬಳು ಆನ್ಲೈನ್ನಲ್ಲಿ ಕೇವಲ 299 ರೂ. ಬೆಲೆಯ ಚೂಡಿದಾರ್ ಕೊಳ್ಳಲು ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.  ಅತ್ತ ಚೂಡಿದಾರ್ ಸಿಗದೇ, ಇತ್ತ ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ