ಸಾಕು ಪ್ರಾಣಿಗಳಿಂದ ತೊಂದರೆ ಉಂಟಾದ್ರೆ ದಂಡ !

ಭಾನುವಾರ, 13 ನವೆಂಬರ್ 2022 (15:41 IST)
ಲಕ್ನೋ : ಶ್ವಾನಗಳ ಹಾವಳಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ನೋಯ್ಡಾ ಪ್ರಾಧಿಕಾರವು ಸಾಕುಪ್ರಾಣಿಗಳಿಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ರೂಪಿಸಿದೆ.

ಇನ್ಮುಂದೆ ಸಾಕುಪ್ರಾಣಿಗಳಿಂದ ತೊಂದರೆ ಉಂಟಾದರೆ, ಮಾಲೀಕರು 10,000 ರೂ. ದಂಡ ಪಾವತಿಸಬೇಕಾಗುತ್ತದೆ.

ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ಶ್ವಾನ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷ ಜನವರಿ 31 ರೊಳಗೆ ನೋಂದಾಯಿಸಿಕೊಳ್ಳಬೇಕು.

ಇಲ್ಲದಿದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾವುದೇ ಅನಾಹುತ ಉಂಟಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ