ತಾಕತ್ತಿದ್ರೆ ಮೊದ್ಲು ಚಾಮುಂಡೇಶ್ಚರಿ ಕ್ಷೇತ್ರದಿಂದ ಗೆದ್ದು ಬನ್ನಿ: ಸಿಎಂಗೆ ಈಶ್ವರಪ್ಪ ಸವಾಲ್

ಸೋಮವಾರ, 2 ಏಪ್ರಿಲ್ 2018 (16:32 IST)
ಹಾವೇರಿ: ಸಿಎಂ ಸಿದ್ದರಾಮಯ್ಯಗೆ ತಾಕತ್ತಿದ್ರೆ ಮೊದ್ಲು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬರಲಿ. ನಂತರ ಮುಖ್ಯಮಂತ್ರಿಯಾಗುವ ಬಗ್ಗೆ ಹೇಳಿಕೆ ನೀಡಲಿ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 
ಹಾವೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕಂತೆ ಸಿ.ಎಂ. ಮಾತನಾಡಲಿ. ಬಿಜೆಪಿ ಒಂದು ಕುಟುಂಬ ಇದ್ದ ಹಾಗೇ, ನಮ್ಮಲ್ಲಿ ಇದ್ದ ಗೊಂದಲ ಸರಿಪಡಿಸಿಕೊಳ್ಳುತ್ತೇವೆ ಎಂದು ಸಿಎಂಗೆ ಟಾಂಗ್ ನೀಡಿದ್ದಾರೆ.
 
ಸೋಮಣ್ಣ ಮಾಡಿದ ಕೆಲಸ ಅಶಿಸ್ತು ಅಲ್ಲ, ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿ ಅಂದ್ರೆ ಓಡೋಡಿ ಬರುತ್ತಾರೆ.
ಸಿದ್ದರಾಮಯ್ಯ  ಹಾಗೂ ರಾಹುಲ್ ಅಂದ್ರೆ ಓಡಿ ಹೋಗುತ್ತಾರೆ ಎಂದು ಲೇವಡಿ ಮಾಡಿದರು.
 
ಹಾವೇರಿ ಜಿಲ್ಲೆಯ ಕಾಗಿನೆಲ್ಲಿಯಲ್ಲಿರುವ ಹಿಂದುಳಿದ ವರ್ಗದ ಸಮಾವೇಶಕ್ಕೆ ಅಮಿತ ಶಾ ಬರುವದು ನಿಶ್ಚಿತ.ಕಾಗಿನೆಲೆಯ ಆದಿಕೇಶವ ದೇವಸ್ಥಾನಕ್ಕೆ ಹಾಗೂ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಮಾವೇಶಕ್ಕೆ ಬರುವ ಜನರಿಗೆ ಊಟದ ಮಾಡಲು ಅನುಮತಿ ನೀಡುವಂತೆ ಚುನಾವಣೆ ಅಧಿಕಾರಿಗಳನ್ನು ಕೇಳಿಕೊಳ್ಳಲಾಗುವದು ಎಂದರು.
 
ಬಿಜೆಪಿ ಸರ್ಕಾರ ಇದ್ದಾಗ, ಹಿಂದುಳಿದ ವರ್ಗದ ಸಾಕಷ್ಟು ಕೆಲಸ ಮಾಡಿದೆ.‌ಮುಖ್ಯಮಂತ್ರಿಗಳು 5 ವರ್ಷದಲ್ಲಿ ಹಿಂದುಳಿದ ವರ್ಗಗಳಕ್ಕೆ ದಲಿತ ಅಭಿವೃದ್ಧಿಗೆ ಖರ್ಚು ಮಾಡಿರುವ ಹಣ ಏಷ್ಟು ಎಂದು ಬಹಿರಂಗ ಪಡಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಗುಡುಗಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ