ಒಮಿಕ್ರಾನ್ ಎಷ್ಟು ವಿಧದಲ್ಲಿ ರೂಪಾಂತರ?

ಮಂಗಳವಾರ, 30 ನವೆಂಬರ್ 2021 (09:02 IST)
'ಒಮಿಕ್ರಾನ್ ಸೋಂಕು 50 ರೂಪಾಂತರಿಗಳನ್ನು ಸೃಷ್ಟಿಸಿದೆ.
ಇವುಗಳಲ್ಲಿ 32 ಮನುಷ್ಯನ ನರಮಂಡಲ ಪ್ರವೇಶಿಸುವ ಸಾಮರ್ಥ್ಯ ಹೊಂದಿದ್ದರೆ, 10 ರೂಪಾಂತರಿಗಳು ಗಂಭೀರ ಪರಿಣಾಮ ಬೀರುವ ಕ್ಷಮತೆ ಹೊಂದಿವೆ' ಎಂದು ಸಾರ್ವಜನಿಕ ನೀತಿ ನಿರೂಪಣಾ ತಜ್ಞ ಚಂದ್ರಕಾಂತ್ ಲಹರಿಯಾ ಮಾಹಿತಿ ನೀಡಿದ್ದಾರೆ. 'ಅಷ್ಟಕ್ಕೂ ಸೋಂಕಿನ ರೂಪಾಂತರ ಎಂದರೆ ನ್ಯೂಕ್ಲಿಯಿಕ್ ಆ್ಯಸಿಡ್ ಅಥವಾ ಅಮಿನೋ ಆ್ಯಸಿಡ್ ಅಣುವಿನಲ್ಲಾಗುವ ಬದಲಾವಣೆ ಆಗಿದೆ.
 ಸಾಮಾನ್ಯವಾಗಿ ರೂಪಾಂತರಿಗಳು ಮೂಲ ಸ್ವರೂಪದಿಂದ ಮತ್ತೊಂದು ಸ್ವರೂಪಕ್ಕೆ ಬದಲಾವಣೆ ಹೊಂದುತ್ತವೆ. ಇದೇ ಆತಂಕಕ್ಕೆ ಕಾರಣವಾಗಿದ್ದು, ಲಸಿಕೆಗಳು ಇವುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿವೆ' ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ